ಶೃದ್ಧೆ, ಹೃದಯ ಸಾನಿಧ್ಯದಿಂದ ಹೇಳುವ ದ್ಸಿಕ್ರ್ಗೆ ಅನುಗ್ರಹ ಪ್ರಾಪ್ತಿ-ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್
ಮಸೀದಿ, ಮಹಲ್ಗಳಲ್ಲಿ ಅನುಗ್ರಹಗಳು ಪ್ರಕಾಶಮಾನವಾಗಿ ಕಾಣಬಹುದಾಗಿದೆ-ಕೆ.ಎಸ್. ಆಟಕೋಯ ತಂಙಳ್
ಉಪ್ಪಿನಂಗಡಿ: ಅಲ್ಲಾಹುವಿನ ಹೆಸರಿನಲ್ಲಿ ಹೇಳುವ ದ್ಸಿಕ್ರ್ಗೆ ಅದರದ್ದೇ ಆದ ಪಾವಿತ್ರತೆ ಇದ್ದು, ದ್ಸಿಕ್ರ್ನ್ನು ಶೃದ್ಧೆ, ಹೃದಯ ಸಾನಿಧ್ಯದಿಂದ ಹೇಳುವ ಮೂಲಕ ಆತ್ಮ ಶುದ್ಧೀಕರಣಗೊಂಡು ಅಲ್ಲಾಹುವಿನಿಂದ ಅನುಗ್ರಹ ಪ್ರಾಪ್ತಿಯಾಗಲಿದೆ ಎಂದು ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡುನ ಪ್ರಧಾನ ಕಾರ್ಯದರ್ಶಿ ಶೈಖುನಾ ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್ ಹೇಳಿದರು.
ಅವರು ಜ. 5ರಂದು ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿರುವ ದ್ಸಿಕ್ರ್ ಹಲ್ಕಾ ಇದರ 22ನೇ ಮಹಾ ಸಂಭ್ರಮದ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದ್ಸಿಕ್ರ್ ಹೇಳುವ ವ್ಯಕ್ತಿಗೆ ಅಲ್ಲಾಹುವಿನ ರಕ್ಷಣೆ ಸದಾ ದೊರಕಲಿದ್ದು, ರೋಗ ನಿವಾರಣೆ, ಸಂಕಷ್ಟ ದೂರವಾಗಲಿದೆ ಎಂದರು.
ಆತೂರು ಬದ್ರಿಯಾ ಜುಮಾ ಮಸೀದಿಯ ಗೌರವಾಧ್ಯಕ್ಷ ಸಯ್ಯದ್ ಕೆ.ಎಸ್. ಆಟಕೋಯ ತಂಙಳ್ರವರು ದ್ಸಿಕ್ರ್ ಮಜ್ಲಿಸ್ಗೆ ನೇತೃತ್ವ ನೀಡಿ ದುವಾಃಶೀರ್ವಚನ ನೀಡಿ ಮಾತನಾಡಿ ಯಾವ ಊರಿನಲ್ಲಿ ದ್ಸಿಕ್ರ್ ಮಜ್ಲಿಸ್, ಸ್ವಲಾತ್ ಮಜ್ಲಿಸ್, ಕುತುಬಿಯ್ಯತ್ ನೇರ್ಚೆ ಮೊದಲಾದ ಕಾರ್ಯಕ್ರಮಗಳು ನಡೆಯುತ್ತಿವೆಯೋ ಆ ಮಸೀದಿ, ಮಹಲ್ಗಳಲ್ಲಿ ಅಲ್ಲಾಹುವಿನ ಅನುಗ್ರಹಗಳು ಪ್ರಕಾಶಮಾನವಾಗಿ ಕಾಣಬಹುದಾಗಿದೆ ಎಂದ ಅವರು ಆತೂರುನಲ್ಲಿ ದ್ಸಿಕ್ರ್ ಸ್ಥಾಪನೆಯ ಬಳಿಕ ಶರೀಅತ್ ಕಾಲೇಜು ಮೊದಲಾದ ವಿದ್ಯಾ ಸಂಸ್ಥೆಗಳನ್ನು ಸಮಾಜಕ್ಕೆ ಅರ್ಪಿಸಲು ಸಾಧ್ಯವಾಗಿರುವಂತದ್ದು, ಅದು ದ್ಸಿಕ್ರ್ನ ಮಹತ್ವದಿಂದಾಗಿರುವುದು ಎಂದರು.
ಆತೂರು ಬದ್ರಿಯಾ ಮಸೀದಿ ಮುದರ್ರಿಸ್ ಅಸ್ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಮಾತನಾಡಿ ಬಹಳ ಪಾವಿತ್ರತೆ ಹೊಂದಿರುವ ಆತೂರು ದ್ಸಿಕ್ರ್ಗೆ ನೇರ್ಚೆ ಹೇಳುವ ಮೂಲಕ ಅದೆಷ್ಟೋ ಮಂದಿ ತಮ್ಮ ಸಂಕಷ್ಟದಿಂದ ಪಾರಾಗಿರುವ ಉದಾಹರಣೆಗಳು ನಮ್ಮ ಮುಂದೆ ಇದ್ದು, ಹೀಗಾಗಿ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆ ವರ್ಷ ವರ್ಷವೂ ವೃದ್ಧಿಯಾಗುತ್ತಿದೆ ಎಂದರು.
ಶಮೀರ್ ದಾರಿಮಿ ಕೊಲ್ಲಂ, ಕೇರಳ ಇವರು ಮುಖ್ಯ ಪ್ರಭಾಷಣ ನೀಡಿದರು. ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಕೆ.ಎ. ಯಾಕೂಬ್ ಸೋಮವಾರಪೇಟೆ ಸಂದರ್ಭೋಚಿತವಾಗಿ ಮಾತನಾಡಿದರು.
ಸನ್ಮಾನ:
ಸಮಾರಂಭದಲ್ಲಿ ಮಹಮ್ಮದ್ ಸಲೀಂ ಸಕಲೇಶಪುರ, ಅಬ್ದುಲ್ ಲತೀಫ್ ಗುರುಪುರ, ಅಬ್ದುಲ್ ಖಾದರ್ ಹಾಜಿ ಸೀಗಲ್, ಇಕ್ಬಾಲ್ ಕೋಲ್ಪೆ ಇವರನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.
ಸಮಾರಂಭದಲ್ಲಿ ಕರಾಯ ಮಸೀದಿ ಮುದರ್ರಿಸ್ ಹೈದರ್ ದಾರಿಮಿ, ಕಡಬ ತಾಲೂಕು ಸಮಸ್ತ ಜಂ-ಇಯ್ಯತ್ತುಲ್ ಖುತುಬಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ದಾರಿಮಿ, ಚಾಪಲ್ಲ ಮಸೀದಿ ಮುದರ್ರಿಸ್ ಮುಹಮ್ಮದ್ ಅಶ್ರಫ್ ಬಾಖವಿ, ಎಸ್.ಕೆ.ಎಸ್.ಎಸ್.ಎಫ್. ವಿಖಾಯ ಉಪ್ಪಿನಂಗಡಿ ಸಂಚಾಲಕ ಇಸ್ಮಾಯಿಲ್ ತಂಙಳ್, ಆತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಹ್ಮದ್ ಕುಂಞ ಹೆಚ್., ಉಪಾಧ್ಯಕ್ಷ ಪೊಡಿಕುಂಞ ನೀರಾಜೆ, ಖಜಾಂಚಿ ಅಬ್ದುಲ್ ಅಝೀಜ್ ಬಿ.ಕೆ., ಆತೂರು ರೇಂಜ್ ಮದ್ರಸ ಮೆನೇಜ್ಮೆಂಟ್ ಕಾರ್ಯದರ್ಶಿ ಜಿ. ಮಹಮ್ಮದ್ ರಫೀಕ್, ಆತೂರು ಬದ್ರಿಯಾ ಸ್ಕೂಲ್ ಸಂಚಾಲಕ ಪಿ. ಆದಂ ಹಾಜಿ, ಕಡಬ ತಾಲೂಕು ಎಸ್.ಎಂ.ಎಫ್. ಪ್ರಧಾನ ಕಾರ್ಯದರ್ಶಿ ಅಶ್ರಫ್ ಶೇಡಿಗುಂಡಿ, ಆತೂರು ಮೊಹಿಯುದ್ದೀನ್ ಮಸೀದಿ ಅಧ್ಯಕ್ಷ ಹೈದರ್ ಕಲಾಯಿ, ಗಂಡಿಬಾಗಿಲು ಮಸೀದಿ ಅಧ್ಯಕ್ಷ ಆದಂ ಹಾಜಿ, ಮಾಜಿ ಅಧ್ಯಕ್ಷ ಹಸೈನಾರ್ ಹಾಜಿ ಕೊಯಿಲ, ಕೆಮ್ಮಾರ ಮದ್ರಸ ಸಮಿತಿ ಅಧ್ಯಕ್ಷ ಎನ್.ಎ. ಇಸಾಕ್, ಸದರ್ ಮುಅಲ್ಲಿಂ ಟಿ.ಎಂ. ಅಬ್ದುಲ್ ರಜಾಕ್ ದಾರಿಮಿ, ನೀರಾಜೆ ಮದ್ರಸ ಅಧ್ಯಕ್ಷ ಎನ್.ಕೆ. ನಝೀರ್, ಆತೂರುಬೈಲ್ ಮದ್ರಸ ಅಧ್ಯಕ್ಷ ಎ.ಕೆ. ಬಶೀರ್, ಎಸ್.ಕೆ.ಎಸ್.ಎಸ್.ಎಫ್. ರಾಜ್ಯ ಕೌನ್ಸಿಲರ್ ಸಿದ್ದಿಕ್ ಎನ್., ಆತೂರು ಕ್ಲಸ್ಟರ್ ಅಧ್ಯಕ್ಷ ಬಿ.ಕೆ. ಅಬ್ದುಲ್ ರಜಾಕ್, ನೆಕ್ಕರೆ ಮಸೀದಿ ಅಧ್ಯಕ್ಷ ಅಬ್ದುಲ್ಲ ಕುಂಞ, ಕತೀಬ್ ಖಾಲಿದ್ ಫೈಝಿ, ಮಹಮ್ಮದ್ ಶರೀಫ್ ಅರ್ಶದಿ, ಹಂಝ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು.
4 ದಿನಗಳ ಧಾರ್ಮಿಕ ಉಪನ್ಯಾಸ:
ವಾರ್ಷಿಕೋತ್ಸವ ಸಮಾರಂಭದ ಸಲುವಾಗಿ 4 ದಿನಗಳ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆದಿದ್ದು, ಜ. 1ರಂದು ಅನ್ವರಲಿ ಹುದವಿ ಮಲಪ್ಪುರಂ, 2ರಂದು ಕಬೀರ್ ಹಿಮಮಿ ಸಖಾಫಿ ಕಾಸರಗೋಡು, 3ರಂದು ಕೀಚೇರಿ ಅಬ್ದುಲ್ ಗಫೂರ್ ಮೌಲವಿ, 4ರಂದು ಅಬೂಬಕ್ಕರ್ ಸಿದ್ದಿಕ್ ಅಝ್ಹರಿ ಪಯ್ಯನ್ನೂರು ಇವರುಗಳು ಮುಖ್ಯ ಪ್ರಭಾಷಣ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಕೆ.ಎಂ. ಸಿದ್ದಿಕ್ ಫೈಝಿ ಸ್ವಾಗತಿಸಿ, ಆತೂರು ಬದ್ರಿಯಾ ಜುಮಾ ಮಸೀದಿ ಕಾರ್ಯದರ್ಶಿ ಸಿರಾಜ್ ಬಡ್ಡಮೆ ವಂದಿಸಿದರು. ರಫೀಕ್ ಗೋಳಿತ್ತಡಿ, ರಫೀಕ್ ಮಾಸ್ಟರ್ ಆತೂರು ಕಾರ್ಯಕ್ರಮ ನಿರೂಪಿಸಿದರು.