ಕಾಣಿಯೂರು: ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿಯ ಆಶ್ರಯದಲ್ಲಿ 67 ನೇ ವರ್ಷದ ಭಜನಾ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಯಕ್ಷಗಾನ ಬಯಲಾಟವು ಪುಣ್ಚತ್ತಾರಿನ ಶ್ರೀ ಹರಿ ಸಭಾಭವನದಲ್ಲಿ ಜ 7 ರಂದು ನಡೆಯಲಿದೆ.
ಬೆಳಿಗ್ಗೆ ಗಣಹೋಮ ಮತ್ತು ನಾಗತಂಬಿಲ, ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭಗೊಂಡು ಮಧ್ಯಾಹ್ನ ಮಹಾಪೂಜೆ ಮತ್ತು ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ವಿವಿಧ ಭಜನಾ ಮಂಡಳಿಗಳಿಂದ ವಿಶೇಷ ಭಜನೆ ಮತ್ತು ಕುಣಿತ ಭಜನಾ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಮಹಾಮಂಗಳಾರತಿ, ಪ್ರಸಾದ ವಿತರಣೆ, ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಹನುಮಗಿರಿ ಮೇಳ ಇವರಿಂದ ಶ್ರೀ ಮಹಾಕಲಿ ಮಗಧೇಂದ್ರ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿಯ ಗೌರವಾಧ್ಯಕ್ಞರಾದ ನಾರಾಯಣ ಗೌಡ ಇಡ್ಯಡ್ಕ, ಅಧ್ಯಕ್ಷರಾದ ಸುಂದರ ನಾಯ್ಕ್ ಉಪ್ಪಡ್ಕ, ಅರ್ಚಕ ಕರುಣಾಕರ ಬೀರುಕುಡಿಕೆ, ಕಾರ್ಯದರ್ಶಿ ಗಿರೀಶ್ ಬೇಂಗಡ್ಕ, ಜತೆ ಕಾರ್ಯದರ್ಶಿ ಕುಲಕೀರ್ತಿ ಉಪ್ಪಡ್ಕ, ಕೋಶಾಧಿಕಾರಿ ಅಮರನಾಥ ಮಾಳ ತಿಳಿಸಿದ್ದಾರೆ.