ಉತ್ತರಾಖಂಡ : ಉತ್ತರಾಖಂಡದ ಹಲದ್ವನಿಯ ರೈಲ್ವೇ ಗೆ ಸೇರಿದ ಜಮೀನಿನಲ್ಲಿರುವ 4 ಸಾವಿರ ಮನೆಗಳನ್ನು ತೆರವುಗೊಳಿಸುವಂತೆ ಉತ್ತರಾಖಂಡ ಹೈ ಕೋರ್ಟ್ ನೀಡಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಇಲ್ಲಿನ ನಿವಾಸಿಗಳ ಹೆಸರು ಪುರಸಭೆಯ ರಿಜಿಸ್ಟರ್ ನಲ್ಲಿ ದಾಖಲಾಗಿದೆ.
ಅವರು ಹಲವು ವರ್ಷಗಳಿಂದ ನಿಯಮಿತವಾಗಿ ಮನೆತೆರಿಗೆ ಪಾವತಿಸುತ್ತಿದ್ದಾರೆ ಮಾತ್ರವಲ್ಲದೆ ಈ ಪ್ರದೇಶದಲ್ಲಿ 5 ಸರಕಾರಿ ಶಾಲೆಗಳು, ಒಂದು ಆಸ್ಪತ್ರೆ, ಮತ್ತು 2 ಓವರ್ ಹೆಡ್ ನೀರಿನ ಟ್ಯಾಂಕ್ ಇದ್ದು ಕಳೆದ 70 ವರ್ಷಗಳಿಂದ ಇಲ್ಲಿ ವಾಸವಾಗಿದ್ದಾರೆ ಎಂದು ಅರ್ಜಿದಾರರು ತಿಳಿಸಿದ್ದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯ ಮೂರ್ತಿ ಅಬ್ದುಲ್ ನಜೀರ್ ಮತ್ತು ನ್ಯಾಯ ಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿ ರಾತ್ರೋರಾತ್ರಿ ಸಾವಿರಾರು ಜನರನ್ನು ಕಿತ್ತು ಹಾಕಲು ಸಾಧ್ಯವಿಲ್ಲ, ಸರಕಾರ ಕಾರ್ಯಸಾದ್ಯವಾದ ಪರಿಹಾರವನ್ನು ರೂಪಿಸಬೇಕು, ಪುನರ್ವಸತಿ ಕಲ್ಪಿಸಬೇಕು ಎಂಬ ಆದೇಶದೊಂದಿಗೆತಡೆಯಾಜ್ಞೆ ನೀಡಿದೆ.