ತಿರುವನಂತಪುರ : ಚಹಾ ಕುಡಿಯಲು ಹೋಟೆಲ್ ಗೆ ಬಂದ ವ್ಯಕ್ತಿ ಹೋಟೆಲ್ ಮಾಲೀಕನಿಗೆ ಚಾಕುವಿನಿಂದ ಇರಿದ ಘಟನೆ ಕೇರಳದ ಮಲಪ್ಪುರoನ ತನೂರ್ ಎಂಬಲ್ಲಿ ನಡೆದಿದೆ. ಆರೋಪಿಯನ್ನು ಜುಬೈರ್ ಎಂದು ಗುರುತಿಸಲಾಗಿದೆ.
ಚಹಾಗೆ ಸಕ್ಕರೆ ಕಡಿಮೆಯಾಗಿದೆಯೆಂದು ಹೋಟೆಲ್ ಮಾಲೀಕನೊಂದಿಗೆ ಜಗಳವಾಡಿದ ಜುಬೈರ್ ಹೋಟೆಲ್ ಮಾಲೀಕ ಮುನಾಫ್ ಎಂಬಾತನಿಗೆ ಚಾಕುವಿನಿಂದ ಹಲವು ಬಾರಿ ತಿವಿದಿದ್ದಾನೆ.ಮುನಾಫ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೆ, ಜುಬೈರ್ ಪೋಲೀಸರ ಅತಿಥಿಯಾಗಿದ್ದಾನೆ.