ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರಕ್ಕೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

0

ಭಜನಾ ಮಂದಿರ ಧಾರ್ಮಿಕ ಚಟುವಟಿಕೆಗಳ ಕೇಂದ್ರವಾಗಬೇಕು-ಮೋಹನದಾಸ ಸ್ವಾಮೀಜಿ

ಅರಿಯಡ್ಕ: ದಾನಕ್ಕಿಂತ ಮಿಗಿಲಾದ ಪುಣ್ಯಕಾರ‍್ಯ ಮತ್ತೊಂದಿಲ್ಲ. ದಾನ ಮಾಡಿದಾಗ ಪುಣ್ಯ ಪ್ರಾಪ್ತಿಯಾಗುತ್ತದೆ. ಪ್ರಕೃತಿಯೇ ಸರ್ವಶ್ರೇಷ್ಠ. ಅದರ ವಿರೋಧವಾಗಿ ನಡೆದುಕೊಂಡರೆ ಸಮಾಜದ ಅವನತಿ ಖಂಡಿತ ಎಂದು ಶ್ರೀಧಾಮ ಮಾಣಿಲ ಕ್ಷೇತ್ರದ ಮೋಹನದಾಸ ಸ್ವಾಮೀಜಿ ಹೇಳಿದರು.

ಅರಿಯಡ್ಕ ಗ್ರಾಮದ ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದ ಪುನರ್ ನಿರ್ಮಿತ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ದೇವರ ರಜತ ಛಾಯಾ ಫಲಕ ಪ್ರತಿಷ್ಠೆ, ಶ್ರೀಕೃಷ್ಣ ಸಭಾ ಭವನ ಲೋಕಾರ್ಪಣೆ ಹಾಗೂ ಭಜನಾ ಮಂಗಳೋತ್ಸವ ಕಾರ‍್ಯಕ್ರಮದ ಪ್ರಯುಕ್ತ ಜ.6ರಂದು ಭವಾನಿಯಮ್ಮ ವೇದಿಕೆಯಲ್ಲಿ ನಡೆದ ಸಭಾ ಕಾರ‍್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಭಜನಾ ಮಂದಿರ ಭಜನೆಗೆ ಮಾತ್ರ ಸೀಮಿತವಾಗದೇ ವಿವಿಧ ಧಾರ್ಮಿಕ ಚಟುವಟಿಕೆಗಳ ಕೇಂದ್ರವಾಗಬೇಕು. ಮುಂದಿನ ದಿನಗಳಲ್ಲಿ ಹರಿಕಥೆ, ಯಕ್ಷಗಾನ, ಧಾರ್ಮಿಕ ತರಬೇತಿ, ಸಂಗೀತ ಮುಂತಾದುವುಗಳಿಗೆ ಮಿಸಲಾಗಲಿ ಎಂದು ಹೇಳಿ ಹಾರೈಸಿದರು. ಭಜನಾ ಸಂಕೀರ್ತನಾ ಸಮಿತಿ ಗೌರವಾಧ್ಯಕ್ಷ ಸದಾಶಿವ ಮಣಿಯಾಣಿ ಕುತ್ಯಾಡಿ ಅಧ್ಯಕ್ಷತೆ ವಹಿಸಿದ್ದರು. ಇಳಂತಾಜೆ ಅಂಜನೇಯ ದೇವಸ್ಥಾನದ ಅಧ್ಯಕ್ಷ ಶಿವರಾಮ ರೈ ಇಳಂತಾಜೆ, ಪೆರಿಗೇರಿ ಅಯ್ಯಪ್ಪ ಭಜನಾ ಮಂದಿರದ ಜೀರ್ಣೊದ್ದಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ ಕನ್ನಯ, ಉದ್ಯಮಿ ಪಾಂಡುರಂಗ ಭಟ್ ಪುತ್ತೂರು, ಕಾವು ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯ, ಅರಿಯಡ್ಕ ಗ್ರಾ.ಪಂ. ಪಿಡಿಓ ಪದ್ಮಕುಮಾರಿ, ಜನ್ಮ ಫೌಂಡೇಶನ್ ಟ್ರಸ್ಟ್‌ನ ಡಾ|ಹರ್ಷಕುಮಾರ್ ರೈ ಮಾಡಾವು, ಮಡ್ಯಂಗಳ ವೆಂಕಟ್ರಮಣ ಭಜನಾ ಮಂಡಳಿ ಅಧ್ಯಕ್ಷ ರವಿ ಬೊಳ್ಳಾಡಿ, ಕುಂಬ್ರ ಮಾತೃಶ್ರೀ ಅರ್ಥ್ ಮೂವರ‍್ಸ್‌ನ ಮಾಲಕ ಮೋಹನದಾಸ್ ರೈ, ನಿವೃತ್ತ ಶಿಕ್ಷಕಿ ಶಂಕರಿ, ಭಜನಾ ಮಂದಿರ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ, ಗೌರವಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಆಡಳಿತ ಸಮಿತಿ ಅಧ್ಯಕ್ಷ ರಾಮದಾಸ ರೈ ಮದ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ: ಇಳಂತಾಜೆ ಸರಸ್ವತಿ ಮತ್ತು ಮುತ್ತಪ್ಪ ರೈ ಸ್ಮರಣಾರ್ಥ, ಇಳಂತಾಜೆ ಶಿವರಾಮ ರೈ, ಪುತ್ತೂರು ಜನ್ಮ ಪೌಂಡೇಶನ್ ಟ್ರಸ್ಟ್(ರಿ)ನ ಡಾ|ಹರ್ಷಕುಮಾರ್ ರೈ ಮಾಡಾವು, ಅರಿಯಡ್ಕ ಬಾಸ್ಕರ ಆಚಾರ‍್ಯರವರನ್ನು ಸನ್ಮಾನಿಸಿ ಗೌರವಸಲಾಯಿತು.

ಕೊಡುಗೆ: ಕೌಡಿಚ್ಚಾರು ರಿಕ್ಷಾ ಚಾಲಕ ಮಾಲಕ ಸಂಘದ ವತಿಯಿಂದ ಕಾಲುದೀಪ ಮತ್ತು ಕುರಿಂಜ ಯಾದವ ಪ್ರಾದೇಶಿಕ ಸಮಿತಿಯಿಂದ 2 ಘಂಟಾ ಮಣಿಯನ್ನು ಕೊಡುಗೆಯಾಗಿ ನೀಡಲಾಯಿತು.

ಬಾಲಕೃಷ್ಣ ಮಣಿಯಾಣಿ, ವಿಶ್ವವಾಥ ರೈ ಕುತ್ಯಾಡಿ, ಕೃಷ್ಣ ಕುಲಾಲ್ ಕೌಡಿಚ್ಚಾರು, ಪ್ರತೀಕ್ ಅಕಾಯಿ, ಮೋನಪ್ಪ ಕುಲಾಲ್, ದರ್ಶನ್ ಪೂಂಜ, ಸುರೇಶ್ ರೈ ಮಡ್ಯಂಗಳ, ಶಿವಪ್ರಸಾದ್ ಮಾಯಿಲಕೊಚ್ಚಿ, ಜಗದೀಶ್ ಬೇಂಗತ್ತಡ್ಕ, ಪೂವಪ್ಪ ನಾಯ್ಕ ಕುತ್ಯಾಡಿ, ಭಾರತಿ ವಸಂತ್ ಕೌಡಿಚ್ಚಾರು, ಸೇಸಮ್ಮ ಗುಂಡ್ಯಡ್ಕ ಅತಿಥಿಗಳಿಗೆ ಶಾಲುಹಾಕಿ ಗೌರವಿಸಿದರು. ಪ್ರೇಕ್ಷಾ, ನಿರೀಕ್ಷಾ, ತ್ರಿಶಾನಿ ಪ್ರಾರ್ಥಿಸಿ, ಗೌರವ ಸಲಹೆಗಾರರಾದ ಭಾಸ್ಕರ ಬಲ್ಯಾಯ ಪ್ರಾಸ್ತಾವಿಕ ಮಾತಾಡಿ ಸ್ವಾಗತಿಸಿದರು, ಕಾರ‍್ಯದರ್ಶಿ ಗಂಗಾಧರ ನಾಯ್ಕ ಮಡ್ಯಂಗಳ ವಂದಿಸಿದರು, ಯತೀಂದ್ರ ಕೌಡಿಚ್ಚಾರು ಕಾರ‍್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ‍್ಯಕ್ರಮ: ವಾಗ್ದೇವಿ ಸಂಗೀತ ಶಾಲೆ ಪುತ್ತೂರು ವಿದುಷಿ ಸವಿತಾ ಪುತ್ತೂರು ಬಳಗದವರಿಂದ ಶಾಸೀಯ ಸಂಗೀತ ಕಛೇರಿ, ಶ್ರೀಕೃಷ್ಣ ಯಕ್ಷಗಾನ ಕಲಾ ಸಂಘ ಕೌಡಿಚ್ಚಾರು, ಬಾಲಕಲಾವಿದರಿಂದ ರಂಗ ಪ್ರವೇಶ ಪ್ರಸಂಗ-ಗುರುದಕ್ಷಿಣೆ ಊರವರಿಂದ ಸಾಂಸ್ಕೃತಿಕ ಕಾರ‍್ಯಕ್ರಮ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಕಾರ‍್ಯಕ್ರಮ ನಡೆಯಿತು.

ಹೊರಕಾಣಿಕೆ: ಅರಿಯಡ್ಕ ಗ್ರಾಮದ ಮಡ್ಯಂಗಳ ಕಲ್ಲೇರಿ ವೆಂಕಟ್ರಮಣ ಮಠ, ಗ್ರಾಮ ದೈವ ಧೂಮಾವತಿ ಕ್ಷೇತ್ರ ಕುತ್ಯಾಡಿ, ಅಯ್ಯಪ್ಪ ಭಜನಾ ಮಂದಿರ ಪೆರಿಗೇರಿ, ಅಯ್ಯಪ್ಪ ಭಜನಾ ಮಂದಿರ ದರ್ಬೆತ್ತಡ್ಕ, ವಿಷ್ಣುಮೂರ್ತಿ ಕ್ಷೇತ್ರ ಮಾವಿಲಕೊಚ್ಚಿ, ವಿಷ್ಣುಮೂರ್ತಿ ಕ್ಷೇತ್ರ ಮಜ್ಜಾರಡ್ಕ, ಕುರಿಂಜ ತರವಾಡು ಮನೆ, ಪಂಚಲಿಂಗೇಶ್ವರ ದೇವಸ್ಥಾನ ಕಾವು, ಮುಂಡಕೊಚ್ಚಿ ಬಪ್ಪುಂಡೇಲು ತರವಾಡು ಮನೆ ಮತ್ತು ಮುತ್ತು ಮಾರಿಯಮ್ಮ ದೇವಸ್ಥಾನಕ್ಕೆ ಹೊರೆಕಾಣಿಕೆ ಆಗಮಿಸಿ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ಪೂಜೆಗೊಂಡು ಚೆಂಡೆವಾದನ, ಗೊಂಬೆ ಕುಣಿತ ಭಜನೆ, ಪೂರ್ಣಕುಂಭದೊಂದಿಗೆ ಭಜನಾಮಂದಿರಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಶ್ರೀಕ್ಷೇತ್ರ ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ ಉಗ್ರಾಣ ಪೂಜೆ ನೆರವೇರಿಸಿದರು.

ನಾರಾಯಣ ರೈ ಮಡ್ಯಂಗಳ, ನಾರಾಯಣ ಪೂಜಾರಿ ಮಡ್ಯಂಗಳ, ಶ್ರೀಹರಿ ಭಟ್ ಕುತ್ಯಾಡಿ, ಸರೋಜ ಅಚ್ಚುತ ಭಟ್ ಕುತ್ಯಾಡಿ, ಗಣಪತಿ ಭಟ್ ಕೋಡಿಯಡ್ಕ, ಅರವಿಂದ ಗೌಡ ಕನ್ನಯ, ಬಾಲಕೃಷ್ಣ ರೈ ಸೇರ್ತಾಜೆ, ರವೀಂದ್ರ ಮಣಿಯಾಣಿ ದರ್ಬೆತ್ತಡ್ಕ, ಅಚ್ಚುತ ಮಣಿಯಾಣಿ ಮಾವಿಲಕೊಚ್ಚಿ, ಸಂಜೀವ ನಾಯ್ಕ ಕುತ್ಯಾಡಿ, ವಾಸು ಮಣಿಯಾಣಿ ಕುರಿಂಜ, ಚೆರಿಯ ಕುಂಞ ಮಣಿಯಾಣಿ, ಸತೀಶ್ವಂದ್ರ ರೈ ಗೋಳ್ತಿಲ,ನರಸಿಂಹ ಪೂಂಜ ಕುಂಜತ್ತಬೈಲು, ಉದಯ ಸ್ವಾಮಿ ನಗರ, ಚಂದ್ರಶೇಖರ ರಾವ್ ನಿಽಮುಂಡ ಕೊಚ್ಚಿ, ಸೀತಾರಾಮ ಮೇಲ್ವಾದೆ, ತಿಮ್ಮಣ್ಣ ನಾಯ್ಕ, ಸೋಮಪ್ಪ ನಾಯ್ಕ ಬಪ್ಪಪುಂಡೇಲು ಮರದ ಮುತ್ತು ಸಿ,ಆರ್.ಸಿ ಮತ್ತು ಅವಿಕುಮಾರ್ ಸಿ.ಆರ್.ಸಿ ಕೌಡಿಚ್ಚಾರುರವರು ವಿವಿಧ ಕಡೆಗಳಲ್ಲಿ ಹಸಿರುವಾಣಿಗೆ ಚಾಲನೆ ನೀಡಿದರು. ಹಸಿರುವಾಣಿ ಸಂಚಾಲಕ ಸಂತೋಷ್ ಮಣಿಯಾಣಿ ಕುತ್ಯಾಡಿ, ಸಹಸಂಚಾಲಕ ಸುಶಾಂತ್ ರೈ ಕುತ್ಯಾಡಿ ಮತ್ತು ಸಮಿತಿ ಸದಸ್ಯರು ಕಾರ‍್ಯಕ್ರಮ ನಿರ್ವಹಣೆ ಮಾಡಿದರು.

ಇಂದು ಶ್ರೀಕೃಷ್ಣ ದೇವರ ರಜತ ಛಾಯಾಫಲಕ ಪ್ರತಿಷ್ಠೆ, ಶ್ರೀಕೃಷ್ಣ ಸಭಾಭವನ ಲೋಕಾರ್ಪಣೆ

ಜ.7ರಂದು ಬೆಳಿಗ್ಗೆ ಗಣಪತಿ ಹೋಮ, ನಾಗನ ಕಟ್ಟೆಯಲ್ಲಿ ತಂಬಿಲ, ಭಜನಾ ಸೇವೆ, ಶ್ರೀಕೃಷ್ಣ ದೇವರ ರಜತ ಛಾಯಾಫಲಕ ಪ್ರತಿಷ್ಠೆ, ಮಹಾಪೂಜೆ, ನಿತ್ಯ ನೈಮಿತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ, ನಡೆಯಲಿದೆ.

ಪುತ್ತೂರು ಶಾಸಕ ಸಂಜೀವ ಮಠಂದೂರು ನೂತನ ಶ್ರೀಕೃಷ್ಣ ಸಭಾಭವನ ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ನಡೆಯುವ ಸಭಾಕಾರ್ಯಕ್ರಮದಲ್ಲಿ ಎಡನೀರು ಕ್ಷೇತ್ರದ ಸಚ್ಚಿದಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ದೀಪಪ್ರಜ್ವಲನೆ ಮಾಡಲಿದ್ದಾರೆ. ಕುಂಟಾರು ರವೀಶ ತಂತ್ರಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ವಾಸ್ತುತಜ್ಞ ಎಸ್.ಎಂ.ಪ್ರಸಾದ್ ಮುನಿಯಂಗಳರವರಿಗೆ ಸನ್ಮಾನ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಅಂಗಾರ ಎಸ್. ದೀಪ ಪ್ರಜ್ವಲನೆ ಮಾಡಲಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್. ನಿರಾಣಿ ದಾನಿಗಳನ್ನು ಸನ್ಮಾನಿಸಲಿದ್ದಾರೆ. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಪರಾಹ್ನ ಭವ್ಯಶ್ರೀ ಕುಲ್ಕುಂದ ಕಂಠಸಿರಿಯಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಲೆ ಜಾಂಬವತಿ ಕಲ್ಯಾಣ ನಡೆಯಲಿದೆ. ರಾತ್ರಿ ವಿಜಯಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶನದಲ್ಲಿ ಕಲಾಸಂಗಮ ಕಲಾವಿದರಿಂದ ಪೌರಾಣಿಕ ನಾಟಕ ಶಿವದೂತೆ ಗುಳಿಗೆ ನಡೆಯಲಿದೆ. ’ಸುದ್ದಿ ಪುತ್ತೂರು ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರವಾಗಲಿದೆ.

LEAVE A REPLY

Please enter your comment!
Please enter your name here