1. ಮಂಗಳೂರು ನಗರ ಹೊರವಲಯದ ನೀರುಮಾರ್ಗದ ಕುಟ್ಟಕಲ ಎಂಬಲ್ಲಿ ಕಾರ್ಯಾಚರಣೆ ನಡೆಸಿದ ಸಿ ಸಿ ಬಿ ಪೊಲೀಸರು ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿದ್ದಾರೆ. ಕಾಸರಗೋಡಿನ ಕಿರಣ್ ರಾಜ್ ಬಂಧಿತ ವ್ಯಕ್ತಿಯಾಗಿದ್ದು ಈತನಿಂದ 27.100 ಕೆ ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
2. ನಗರದ ಬಂಟ್ಸ್ ಹಾಸ್ಟೆಲ್ ರಸ್ತೆಯ ಫ್ಲಾಟ್ ಒಂದಕ್ಕೆ ದಾಳಿ ನಡೆಸಿದ ಸಿ ಸಿ ಬಿ ಪೊಲೀಸರು ಗಾಂಜಾ ಹೊಂದಿದ್ದ ಆರೋಪದಲ್ಲಿ ರಾಮ್ ಜಿ ಶಾ ಎಂಬವರನ್ನು ಬಂಧಿಸಿ 50 ಸಾವಿರ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
3. ಮುಡಿಪು ಪಂಚಾಯತ್ ಪರಿಸರದಲ್ಲಿ MDMA ಸಿಂಥೆಟಿಕ್ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದಲ್ಲಿ ಮುಡಿಪು ನಿವಾಸಿ ನವಾಜ್ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತನಿಂದ 15 ಗ್ರಾಂ MDMA ವಶಕ್ಕೆ ಪಡೆಯಲಾಗಿದೆ.
4. ಕೊಲ್ನಾಡು ಗ್ರಾಮದ ಬೋಲ್ಪಾದೆಯಲ್ಲಿ ಮಾದಕ ವಸ್ತು ಸೇವಿಸಿದ ಸಾಲೆತ್ತೂರ್ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಮತ್ತು ಕಾನಭಜನ ನಿವಾಸಿ ಕಬೀರ್ ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
5. ಅಪ್ರಾಪ್ತ ಬಾಲಕನನ್ನು ಆಪಹರಿಸಿದ 21 ವರ್ಷದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸಂತಾನವಿಲ್ಲದ ತನ್ನ ಚಿಕ್ಕಪ್ಪನಿಗೆ ಉಡುಗೊರೆ ನೀಡುವ ಉದ್ದೇಶದಿಂದ ಅಪ್ರಾಪ್ತನನ್ನು ಅಪಹರಿಸಿರುವುದಾಗಿ ವಿಚಾರಣೆ ವೇಳೆ ಯುವಕ ಪೊಲೀಸರಿಗೆ ತಿಳಿಸಿದ್ದಾನೆ.
6. 50 ವರ್ಷದ ಮಹಿಳೆಗೆ ಗುಂಡು ಹಾರಿಸಿದ ಆರೋಪದ ಮೇಲೆ ಯುವತಿಯೋರ್ವಳನ್ನು ಈಶಾನ್ಯ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಗುಂಡೇಟಿಗೆ ಒಳಗಾದ ಖುರ್ಷಿದ ಎಂಬ ಮಹಿಳೆಯ ಪುತ್ರನ ವಿರುದ್ಧ ಈ ಯುವತಿ 2020 ರಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು ಎನ್ನಲಾಗಿದೆ. ಖುರ್ಷಿದ ಆರೋಗ್ಯ ಸ್ಥಿರವಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
7. ಗೋವಾದಿಂದ ಮುಂಬೈಗೆ ಹಾರಾಟ ನಡೆಸಬೇಕಿದ್ದ ವಿಮಾನದಲ್ಲಿ ಇಬ್ಬರು ವಿದೇಶಿ ಪುರುಷ ಪ್ರಯಾಣಿಕರು ವಿಮಾನದ ಮಹಿಳಾ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸಿದ್ದು ಇಬ್ಬರನ್ನು ವಿಮಾನದಿಂದ ಕೆಳಗಿಳಿಸಿ CISF ವಶಕ್ಕೆ ನೀಡಲಾಗಿದೆ.
8. ತಂದೆಯ ಸ್ನೇಹಿತನೆಂದು ಹೇಳಿದ ಅಪರಿಚಿತ ವ್ಯಕ್ತಿಯೊಬ್ಬ ಯುವಕನೊಬ್ಬನಿಂದ ತನ್ನ ಖಾತೆಗೆ ವರ್ಗಾಯಿಸಿ ವಂಚಿಸಿರುವ ಪ್ರಕರಣ ಮಣಿಪಾಲದಲ್ಲಿ ನಡೆದಿದ್ದು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
9.ಕೋಟಿಗಟ್ಟಲೆ ಮೌಲ್ಯದ ಅಂಬರ್ ಗ್ರೀಸ್ ನ್ನು (ತಿಮಿಂಗಿಲದ ವಾಂತಿ )ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಯತ್ನಿಸಿದ ಇಬ್ಬರನ್ನು ಸಿ ಸಿ ಬಿ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನಿಮಿತ್ (26) ಮತ್ತು ಪೂಂಜಾಲಕಟ್ಟೆಯ ಯೋಗೀಶ್ (41)ಬಂಧಿತರು.