ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಡಿ ವೈ ಚಂದ್ರಚೂಡ್ ಜಾಗತಿಕ ನಾಯಕತ್ವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರು ದೇಶ ಮತ್ತು ವಿಶ್ವದಾದ್ಯಂತ ನ್ಯಾಯವಾದಿಯಾಗಿ ಸಲ್ಲಿಸಿದ ಜೀವಮಾನದ ಸೇವೆಯನ್ನು ಗುರುತಿಸಿ ಹಾರ್ವರ್ಡ್ ಲಾ ಸ್ಕೂಲ್ ಸೆಂಟರ್ ಜಾಗತಿಕ ನಾಯಕತ್ವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜನವರಿ 11 ರಂದು ಆನ್ಲೈನ್ ಮೂಲಕ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು.