ಮಂಗಳೂರು :ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವ ಎಳೇ ಪ್ರಾಯದ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಹೆತ್ತವರ ಆತಂಕಕ್ಕೆ ಕಾರಣವಾಗಿದೆ. ಇತ್ತೀಚಿಗೆ ಎಳೇ ವಯಸ್ಸಲ್ಲಿ ಹೃದಯಾಘಾತದಿಂದ ಮರಣ ಪಟ್ಟ ಸುದ್ದಿಗಳು ಜಾಸ್ತಿಯಾಗಿ ಬರುತ್ತಿದ್ದು ಈ ಪಟ್ಟಿಗೆ ಕೊಡಗಿನ ಕುಶಾಲನಗರದ ಕೂಡು ಮಂಗಳೂರಿನ 6 ನೇ ತರಗತಿ ವಿದ್ಯಾರ್ಥಿ 12 ವರ್ಷದ ಚೇತನ್ ಹೆಸರು ಸೇರ್ಪಡೆಯಾಗಿದೆ. ಕೀರ್ತನ್ ಹೃದಯಾಘಾತದಿಂದ ಮೃತಪಟ್ಟಿದ್ದು ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ.
ಇನ್ನೊಂದೆಡೆ ಪುಣಚ ಶ್ರೀ ದೇವಿ ವಿದ್ಯಾಕೇಂದ್ರದ 8 ನೇ ತರಗತಿ ವಿದ್ಯಾರ್ಥಿ 14 ವರ್ಷ ಪ್ರಾಯದ ಹೇಮಂತ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯವರು ಇರುಮುಡಿ ಕಟ್ಟುವ ಕಾರ್ಯಕ್ರಮಕ್ಕೆ ಹೋಗಿದ್ದು, ಪರೀಕ್ಷೆಗೆ ಓದಲು ಇದೆಯೆಂದು ಚೇತನ್ ಕಾರ್ಯಕ್ರಮಕ್ಕೆ ಹೋಗದೆ ಮನೆಯಲ್ಲಿ ಉಳಿದಿದ್ದ. ಮನೆಯವರು ತಿರುಗಿ ಬರುವಷ್ಟರಲ್ಲಿ ನೇಣಿನ ಕುಣಿಕೆಗೆ ಕೊರಳೊಡ್ಡಿ ಇಹಲೋಕ ತ್ಯಜಿಸಿದ್ದ. ಪುಣಚದ ಮನಿಲ ರವೀಂದ್ರ ಗೌಡ ದಂಪತಿಗಳ ಪುತ್ರನಾಗಿರುವ ಹೇಮಂತ್ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.