ಅಡಿಕೆ, ಜೇನು, ಅಕ್ವೇರಿಯಂ, ಸಂಬಾರ ಬೆಳೆ, ಹಣ್ಣಿನ ಗಿಡ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ:ಸಸ್ಯ ಜಾತ್ರೆಯಲ್ಲಿ 2ನೇ ದಿನದ ಕೃಷಿ ವಿಚಾರ ಸಂಕಿರಣ

0

ಪುತ್ತೂರು:ಸುದ್ದಿ ಮಾಹಿತಿ ಟ್ರಸ್ಟ್ ಸಾರಥ್ಯದಲ್ಲಿ ಕಿಲ್ಲೆ ಮೈದಾನದಲ್ಲಿ ನಡೆದ ಸಸ್ಯ ಜಾತ್ರೆಯ ಎರಡನೇ ದಿನವೂ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಸಂಕಿರಣಗಳು ನಡೆದವು.

`ಅಡಿಕೆ ಕಾಯಿಲೆಗಳ ತಡೆ’ ವಿಚಾರದಲ್ಲಿ ಐಸಿಎಆರ್‌ಸಿಪಿಸಿಆರ್‌ಐ ಪ್ರಾಂತೀಯ ಕೇಂದ್ರ ವಿಟ್ಲದ ವಿಜ್ಞಾನಿ ಡಾ.ಎನ್.ಆರ್ ನಾಗರಾಜ್ ವಿಚಾರ ಸಂಕಿರಣ ನಡೆಸಿಕೊಟ್ಟರು.

`ಅಡಿಕೆಗೆ ಪರ್ಯಾಯ ವಾಣಿಜ್ಯ ಬೆಳೆಗಳು, ಸಾಂಬಾರ ಬೆಳೆಗಳು’ ಬಗ್ಗೆ ಕೃಷಿ ವಿಜ್ಞಾನಿ, ತಳಿ ವಿಜ್ಞಾನಿ ಸಂಶೋಧಕ ಡಾ|ಡಿ.ಚಂದ್ರಶೇಖರ ಚೌಟ, ನವನೀತ್ ನರ್ಸರಿಯ ವೇಣುಗೋಪಾಲ್,`ಸಮಗ್ರ ಕೃಷಿ’ಕುರಿತು ಪ್ರಗತಿಪರ ಕೃಷಿಕ, ಉದ್ಯಮಿಗಳೂ ಆಗಿರುವ ಅಜಿತ್ ಶೆಟ್ಟಿ ಕಡಬ ವಿಚಾರ ಸಂಕಿರಣ ನಡೆಸಿದರು.

ಜೇನು ಕೃಷಿ ವಿಚಾರದಲ್ಲಿ ಪ್ರಗತಿಪರ ಜೇನು ಕೃಷಿಕರಾದ ರಾಧಾಕೃಷ್ಣ ಕೋಡಿ, ಮನಮೋಹನ ಅರಂಬ್ಯ, ಅಕ್ವೇರಿಯಂನಲ್ಲಿ ಮತ್ಸ್ಯ ಕನ್ಯಫಾರ್ಮ್ ಅನಿಮಲ್ ಕೇರ್ ಎಣ್ಣೆಹೊಳೆ ಕಾರ್ಕಳದ ಶಶಿಕುಮಾರ್ ಕಾರ್ಕಳ, ಹಣ್ಣಿನ ಗಿಡಗಳ ಬಗ್ಗೆ ಹಣ್ಣಿನ ಕೃಷಿಕ ಅನಿಲ್ ಬಳಂಜ ವಿಚಾರ ಸಂಕಿರಣ ನಡೆಸಿದರು.

ಕೃಷಿ ಉತ್ಪಾದನೆಗಳ ಮೌಲ್ಯ ವರ್ಧನೆಯ ವಿಚಾರದಲ್ಲಿ ಸಮಗ್ರ ಕೃಷಿಯೊಂದಿಗಿನ ಅಣಬೆ ಕೃಷಿಕ ಗಿರೀಶ್ವರ್ ಭಟ್ ಬಾಳೆಗುಳಿ ಇರ್ದೆ, ಅಣಬೆ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯಲ್ಲಿ ನಿತ್ಯ ಫುಡ್ ಪ್ರಾಡಕ್ಟ್‌ನ ರಾಧಾಕೃಷ್ಣ ಇಟ್ಟಿಗುಂಡಿ, ಮರಿಕೆ ಆರ್ಗ್ಯಾನಿಕ್ ಪ್ರಾಡಕ್ಟ್‌ನ ಸುಹಾಸ್ ಮರಿಕೆ, ತೆಂಗು ಬೆಳೆಗಾರರ ಸಂಘದ(ಎಫ್‌ಇಒ) ಚೇತನ್ ಎ, ಸಿಪಿಸಿಆರ್‌ಐ ಅತ್ಯುತ್ತಮ ಅಡಿಕೆ ಕೃಷಿಕ,ಮುಖ್ಯಮಂತ್ರಿಗಳಿಂದ ಉತ್ತಮ ಎಫ್‌ಪಿಒ ಪ್ರಶಸ್ತಿ ಪುರಸ್ಕೃತ ರಾಮಕಿಶೋರ್ ಕೆ.ವಿಚಾರ ಸಂಕಿರಣ ನಡೆಸಿಕೊಟ್ಟರು.

ಪ್ರಗತಿಪರ ಕೃಷಿಕರಾದ ಸೇಡಿಯಾಪು ಜನಾರ್ದನ ಭಟ್ ಗೋಷ್ಠಿ ಸಮಾಪ್ತಿ ಮಾಡಿದರು.ಅಡಿಕೆ ಪತ್ರಿಕೆ ಉಪಸಂಪಾದಕ ನಾ.ಕಾರಂತ ಪೆರಾಜೆ ಕಾರ್ಯಕ್ರಮ ನಿರ್ವಹಿಸಿದರು.

ಸಸ್ಯಜಾತ್ರೆ:ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ:

ಸಸ್ಯಜಾತ್ರೆಯಲ್ಲಿ ಎರಡನೇ ದಿನ ಸಂಜೆ ಸಭಾ ಕಾರ್ಯಕ್ರಮದ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅದಿತಿ ಪುತ್ತೂರು ಇವರಿಂದ ಪೈಂಟಿಂಗ್ ಡ್ಯಾನ್ಸ್,ವಿದುಷಿ ರೋಹಿಣಿ ಉದಯ ಚೌಟ ಶಿಷ್ಯರಿಂದ ನೃತ್ಯ ವೈವಿಧ್ಯ, ಲೋಕೇಶ್ ಊರುಬೈಲು ಸುಳ್ಯ ಬಳಗದವರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.ಕಾರ್ಯಕ್ರಮ ನೀಡಿದ ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪತ್ರಕರ್ತರಾದ ಉಮೇಶ್ ಮಿತ್ತಡ್ಕ, ಶಿವಪ್ರಸಾದ್ ಅಲೆಟ್ಟಿ, ಕಾರ್ಯಕ್ರಮ ನಿರ್ವಹಿಸಿದರು.

ವಿದ್ಯಾರ್ಥಿಳಿಗೆ ವಿವಿಧ ಸ್ಪರ್ಧೆಗಳು:

ಕೃಷಿ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಸಸ್ಯ ಜಾತ್ರೆಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿಕೊಳ್ಳಲಾಗಿತ್ತು.ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ, ಕಾಲೇಜು ಹಾಗೂ ಸಾರ್ವಜನಿಕರಿಗೆ ಚಿತ್ರಕಲೆ, ಪ್ರಬಂಧ, ಕವನ, ಗುರುತಿಸುವಿಕೆ, ಪ್ರಾಥಮಿಕ, ಪ್ರೌಢ, ಪದವಿ ಹಾಗೂ ಹಿರಿಯರಿಗೆ `ನಾ ಕಂಡಂತೆ ಸಸ್ಯಜಾತ್ರೆ’ ಎಂಬ ವಿಷಯದಲ್ಲಿ ಪ್ರಬಂಧ ರಚನೆ ಮತ್ತು ಕವಿತೆ ರಚನಾ ಸ್ಪರ್ಧೆ ಹಾಗೂ ಸಸ್ಯ ಜಾತ್ರೆಯಲ್ಲಿ ಗುರುತಿಸುವ ಸ್ಪರ್ಧೆ, ಪೇಪರ್ ಕಟ್ಟಿಂಗ್, ಕೊಲಾಜ್ ಮೊದಲಾದ ಗುಂಪು ಸ್ಪರ್ಧೆಗಳು ನಡೆಯಿತು.

ಸ್ಪರ್ಧಾ ವಿಜೇತರು:

ಚಿತ್ರಕಲೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ನಿಶಿಕಾ ಕೆ(ಪ್ರ), ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿಘ್ನೇಶ್(ದ್ವಿ), ಪ್ರೌಢಶಾಲಾ ವಿಭಾಗದಲ್ಲಿ ಸುದಾನ ಶಾಲಾ ಅನಿಕಾ ಯು(ಪ್ರ),ಅವನಿ ರೈ(ದ್ವಿ), ಕಾಲೇಜು ವಿಭಾಗದಲ್ಲಿ ಜಿಡೆಕಲ್ಲು ಪ್ರಥಮ ದರ್ಜೆ ಕಾಲೇಜಿನ ಹರ್ಷಿತ್ ವಿಶ್ವಕರ್ಮ(ಪ್ರ), ಅಕ್ಷಯ ಕಾಲೇಜಿನ ದುರ್ಗಾಶ್ರೀ(ದ್ವಿ), ಪ್ರಬಂಧ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಜನನಿ ವೈ ನಾಯ್ಕ(ಪ್ರ), ಶ್ರೀನಿಧಿ ಆಚಾರ್ಯ(ದ್ವಿ), ಪ್ರೌಢಶಾಲಾ ವಿಭಾಗದಲ್ಲಿ ರಾಮಕೃಷ್ಣ ಪ್ರೌಢಶಾಲಾ ಹಸ್ತ ಕೆ.ಪಿ(ಪ್ರ),ಆದಿತ್ಯ(ದ್ವಿ), ಕಾಲೇಜು ವಿಭಾಗದಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದಿವ್ಯಾ ಎಂ.(ಪ್ರ), ಅಕ್ಷಯ ಕಾಲೇಜಿನ ಯಶಸ್ವಿನಿ ಪಿ.ಎಂ(ದ್ವಿ),ಸಾರ್ವಜನಿಕ ವಿಭಾಗದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಹರಿಪ್ರಸಾದ್ ಎಂ., ಪೂರ್ಣಿಮಾ ಮಲ್ಯ, `ನಾ ಕಂಡಂತೆ ಸಸ್ಯ ಜಾತ್ರೆ’ ಎಂಬ ಕವನ ರಚನೆಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪಲ್ಲವಿ(ಪ್ರ), ಬೆಟ್ಟಂಪಾಡಿ ನವೋದಯ ಪ್ರೌಢಶಾಲಾ ಶಿಲ್ಪ(ದ್ವಿ), ಕಾಲೇಜು ವಿಭಾಗದಲ್ಲಿ ಸಂತ ಫಿಲೋಮಿನಾ ಕಾಲೇಜಿನ ಸ್ಮಿತಾ ಎಸ್ ರೈ(ಪ್ರ), ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿ ಕೃತಿಕಾ ಪಿ(ದ್ವಿ), ಸಾರ್ವಜನಿಕ ವಿಭಾಗದಲ್ಲಿ ಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ.ಪಕ್ಕಳ(ಪ್ರ),ಬಡಗನ್ನೂರು ಹಿ.ಪ್ರಾ ಶಾಲಾ ಶಿಕ್ಷಕ ಜನಾರ್ದನ ದುರ್ಗ ನಿಡ್ಪಳ್ಳಿ(ದ್ವಿ), ಕೊಲಾರ ಸ್ಪರ್ಧೆಯಲ್ಲಿ ಸುಲೋಚನಾ ಮತ್ತು ಪೂಜಾ(ಪ್ರ), ನಿಲಿಕ್ಷಾ ಮತ್ತು ಅವನಿ ಎಸ್.ವಿ(ದ್ವಿ), ಮೈ ಹೋಮ್ ಗಾರ್ಡನ್ ಸ್ಪರ್ಧೆಯಲ್ಲಿ ಶರಣ್ಯ ಬಂಗಾರಡ್ಕ(ಪ್ರ), ಪ್ರತಿಮಾ ಹೆಗ್ಡೆ ಪರ್ಲಡ್ಕ(ದ್ವಿ) ಹಾಗೂ ಚಂದಪ್ಪ ಮೂಲ್ಯ ಉಪ್ಪಿನಂಗಡಿ ಬಹುಮಾನ ಪಡೆದುಕೊಂಡರು.

ಸಸ್ಯಜಾತ್ರೆ ಪ್ರಾಯೋಜಕರು:

ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು, ಬ್ಯಾಂಕ್ ಆಫ್ ಬರೋಡ, ಕೋಡಿಂಬಾಡಿ ರೈ ಎಸ್ಟೇಟ್ ಮ್ಹಾಲಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು,ಅಬುಧಾಬಿಯ ಉದ್ಯಮಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಿತ್ರಂಪಾಡಿ ಜಯರಾಮ ರೈ, ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು, ಸುದ್ದಿ ಸೌಹಾರ್ದ ಸಹಕಾರಿ ಸಂಘ ಪುತ್ತೂರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಶ್ ರೈ, ಐಸಿಎಆರ್, ಡಿಸಿಆರ್‌ನ ನಿವೃತ್ತ ಪ್ರಧಾನ ವಿಜ್ಞಾನಿ ಡಾ|ಯದುಕುಮಾರ್, ನೆಹರುನಗರ ಸುದಾನ ವಿದ್ಯಾ ಸಂಸ್ಥೆ ಸಂಚಾಲಕ ರೆ.ವಿಜಯ ಹಾರ್ವಿನ್, ಪದ್ಮ ಸೋಲಾರ್ ಮ್ಹಾಲಕ ಪದ್ಮನಾಭ ಶೆಟ್ಟಿ, ಏಳ್ಮುಡಿ ಲಹರಿ ಡ್ರೈಫ್ರುಟ್ಸ್‌ನ ಮ್ಹಾಲಕ ಕುಸುಮ್‌ರಾಜ್, ಒಕ್ಕಲಿಗ ಗೌಡ ಪತ್ತಿನ ಸಹಕಾರಿ ಸಂಘ ಪುತ್ತೂರು, ಎ.ವಿ.ಜಿ ಅಸೋಸಿಯೇಟ್ಸ್‌ನ ಎ.ವಿ.ನಾರಾಯಣ, ಕರ್ನಾಟಕ ರಕ್ಷಣಾ ವೇದಿಕೆ(ಸ್ವಾಭಿಮಾನಿ ಬಣ)ಯ ಜಿಲ್ಲಾಧ್ಯಕ್ಷ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ,ಕುರಿಯ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಧು ನರಿಯೂರು, ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಕಲ್ಲಮ ರಾಘವೇಂದ್ರ ಮಠದ ವ್ಯವಸ್ಥಾಪಕ ಡಾ.ಕೆ.ಎಸ್.ಭಟ್ ಕಲ್ಲಮ, ಪ್ರಗತಿಪರ ಜೇನು ಕೃಷಿಕ ಮನಮೋಹನ ಅರಂಬ್ಯ, ದರ್ಬೆ ಅಶ್ವಿನಿ ಹೊಟೇಲ್ ಮ್ಹಾಲಕ ಕರುಣಾಕರ ರೈ ಹಾಗೂ ಬಿಜೆಪಿ ಯುವ ಮೋರ್ಛಾ ಮುಖಂಡ ಅಕ್ಷಯ್ ರೈ ದಂಬೆಕ್ಕಾನ ಸಸ್ಯಜಾತ್ರೆ ಕಾರ್ಯಕ್ರಮದ ಪ್ರಾಯೋಜಕರಾಗಿ ಸಹಕರಿಸಿದ್ದರು.

ಲೈವ್‌ನಲ್ಲೂ ಪ್ರಶ್ನೋತ್ತರ

ಬೆಳಗ್ಗಿನಿಂದ ಸಂಜೆಯ ತನಕ ನಡೆದ ವಿಚಾರ ಸಂಕಿರಣದ ಪ್ರತಿ ಹಂತದಲ್ಲೂ ಸುದ್ದಿ ಯು ಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರ ನೋಡಿದ ವೀಕ್ಷಕರು ಕ್ಷಣ ಕ್ಷಣ ಹಲವು ಪ್ರಶ್ನೆಗಳನ್ನು ಕಳುಹಿಸುತ್ತಿದ್ದರು.ವಿಚಾರ ಸಂಕಿರಣದ ನಡುವೆ ಈ ಬಗ್ಗೆ ಉತ್ತರ ನೀಡಲಾಗುತ್ತಿತ್ತು.

ಪೊಟೋ:ಡಾ.ನಾಗರಾಜ್ ವಿಟ್ಲ, ಡಾ|ಡಿ.ಚಂದ್ರಶೇಖರ ಚೌಟ, ವೇಣುಗೋಪಾಲ ಕೆದಿಲಾಯ, ಅಜಿತ್ ಶೆಟ್ಟಿ ಕಡಬ, ರಾಧಾಕೃಷ್ಣ ಕೋಡಿ, ಮನಮೋಹನ್ ಅರಂಬ್ಯ, ಶಶಿಕುಮಾರ್ ಕಾರ್ಕಳ, ಅನಿಲ್ ಬಳಂಜ, ಸುಹಾಸ್ ಮರಿಕೆ, ರಾಮಕಿಶೋರ್ ಕೆ, ಗಿರೀಶ್ವರ್ ಭಟ್, ಚೇತನ್ ಎ, ಸೇಡಿಯಾಪು ಜನಾರ್ದನ ಭಟ್, ರಾಧಕೃಷ್ಣ ಇಟ್ಟಿಗುಂಡಿ

LEAVE A REPLY

Please enter your comment!
Please enter your name here