ಬೆಳಗಾವಿ : ಮುಸ್ಲಿಮರ ಜತೆ ವ್ಯಾಪಾರ ಮಾಡಿದರೆ ಗೋಹತ್ಯೆ, ಲವ್ ಜಿಹಾದ್ಗೆ ಬೆಂಬಲ ನೀಡಿದಂತೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಬೆಳಗಾವಿಯ ವಿರಾಟ್ ಹಿಂದೂ ಮಹಾಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮುತಾಲಿಕ್ ಹಲಾಲ್, ಹಿಜಾಬ್ ಮೂಲಕ ಸಂವಿಧಾನ ತಿರಸ್ಕರಿಸುವವರ, ಪೊಲೀಸ್ ಠಾಣೆ ಸುಟ್ಟವರ, ಸೈನಿಕರಿಗೆ ಕಲ್ಲೆಸೆದವರ ಜತೆ ವ್ಯಾಪಾರ ನಿಲ್ಲಿಸುವಂತೆ ಕರೆ ನೀಡಿದ್ದಾರೆ. ಶಸ್ತ್ರ ಪೂಜೆ ಮಾಡಬೇಕು, ಮನೆಯಲ್ಲಿ ಶಸ್ತ್ರ ಇಟ್ಟುಕೊಳ್ಳಬೇಕು, ತಲ್ವಾರ್, ಚಾಕು, ಕುಡುಗೋಲು ಇಟ್ಟು ಪೂಜೆ ಮಾಡಿ ಎಂದು ಕರೆ ನೀಡಿ ವಿವಾದ ಸೃಷ್ಟಿಸಿದ್ದಾರೆ.