ತಿಂಗಳಾಡಿ ಪ್ರಿಮಿಯರ್ ಲೀಗ್‌ನ 3ನೇ ಆವೃತ್ತಿಯ ಕ್ರಿಕೆಟ್ ಪಂದ್ಯಾಟ

0

ಪುತ್ತೂರು: ತಿಂಗಳಾಡಿ ಅಭಿನಂದನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ತಿಂಗಳಾಡಿ ಪ್ರಿಮಿಯರ್ ಲೀಗ್‌ನ 3ನೇ ಆವೃತ್ತಿಯ ಕ್ರಿಕೆಟ್ ಪಂದ್ಯಾಟ ಜ.8ರಂದು ಕೆಯ್ಯೂರು ಶಾಲಾ ಕ್ರಿಡಾಂಗಣದಲ್ಲಿ ನಡೆಯಿತು. ಕೆಯ್ಯೂರು ಗ್ರಾ.ಪಂ ಅಧ್ಯಕ್ಷೆ ಜಯಂತಿ ದೀಪಬೆಳಗಿಸಿ ಪಂದ್ಯಾಟ ಉದ್ಘಾಟಿಸಿ ಶುಭಹಾರೈಸಿದರು. ಕೆದಂಬಾಡಿ ಗ್ರಾ.ಪಂ ಅಧ್ಯಕ್ಷ ರತನ್ ರೈ, ಕೆಯ್ಯೂರು ಶ್ರೀದುರ್ಗಾ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ದಿನೇಶ್, ತುಳುನಾಡ್ ಟೈಗರ್ಸ್ ತಂಡದ ಮಾಲಕ ಅಮರ್ ರೈ ದರ್ಬೆ, ಶ್ರೀಕೃಷ್ಣ ವಾರಿಯರ್ಸ್ ತಂಡದ ಮಾಲಕ ಗಣೇಶ್ ರೈ ಮಿತ್ರಂಪಾಡಿ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಪಂದ್ಯಾಟಕ್ಕೆ ಶುಭ ಹಾರೈಸಿದರು.

ಸಮಾರೋಪ: ಸಂಜೆ ಪಂದ್ಯಾಟದ ಸಮಾರೋಪ ಸಮಾರಂಭ, ಸನ್ಮಾನ ಕಾರ್ಯಕ್ರಮ ಹಾಗೂ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮ ನಡೆಯಿತು. ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಸತೀಶ್ ರೈ ಮೀತ್ತೋಡಿ ಸಭಾಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿ ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಶೆಟ್ಟಿ ಮಠ ಮಾತನಾಡಿ ಕ್ಲಬ್‌ನ ಸಮಾಜಮುಖಿ ಕೆಲಸಗಳ ಬಗ್ಗೆ ಮಾತನಾಡಿ ಅಭಿನಂದಿಸಿದರು.

ಗೌರವಾರ್ಪಣೆ: ಮಾಧ್ಯಮದ ಸೇವೆಗೆ ಸುದ್ದಿ ಬಿಡುಗಡೆಯ ವರದಿಗಾರ ಶ್ರೀಧರ್ ರೈ ಕೊಡಂಬು, ಮೆಸ್ಕಾಂ ಲೈನ್ ಮ್ಯಾನ್ ಅದಪ್ಪ ಗೌಡ, ಕ್ರಿಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಕೆಯ್ಯೂರು ಶಾಲಾ ವಿದ್ಯಾರ್ಥಿನಿ ಹಾಗೂ ಕಲಿಕೆಯಲ್ಲಿ ಉತ್ತಮ ಅಂಕ ಗಳಿಸಿದ ತಿಂಗಳಾಡಿ ಶಾಲಾ ವಿದ್ಯಾರ್ಥಿನಿಯರಿಗೆ ಗೌರವರ್ಪಣೆ ಮಾಡಲಾಯಿತು. ಇಬ್ಬರು ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ಹಸ್ತಾಂತರ ಮಾಡಲಾಯಿತು.

ವೇದಿಕೆಯಲ್ಲಿ ಚಂದ್ರಶೇಖರ ರೈ ನಡುಬೈಲು, ತಾರಾನಾಥ್ ರೈ ಮಠ, ಗಣೇಶ್ ರೈ ಮಿತ್ರಂಪಾಡಿ, ಶ್ರೀಧರ್ ರೈ ಕೊಡಂಬು, ಅಧ್ಯಕ್ಷ ಸತೀಶ್ ರೈ, ಸ್ಥಾಪಕಾಧ್ಯಕ್ಷ ರವಿಕುಮಾರ್ ರೈ ಎಲಿಯಾ ಮಠ, ಉಪಾಧ್ಯಕ್ಷ ರಮೇಶ್ ರೈ, ನಿಶಾಂತ್ ರೈ, ಸುಭಾಷ್ ರೈ, ಲೋಕೇಶ್ ರೈ, ಶಫೀಕ್ ಮಾಸ್ಟರ್, ವರುಣ್, ಧನಂಜಯ, ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಸ್ಥಾಪಕ ಅಧ್ಯಕ್ಷ ರವಿಕುಮಾರ್ ರೈ ಸ್ವಾಗತಿಸಿ, ಶರತ್ ಗೌಡ ಗುತ್ತು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಲೋಹಿತ್ ಗೌಡ ಗುತ್ತು ವಂದಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಟಿಪಿಲ್ ಸೀಸನ್ 3ರ ಪ್ರಥಮ ವಿಜೇತ ತಂಡ ರವಿಕುಮಾರ್ ರೈ ಮಾಲಕತ್ವದ ಅಭಿನಂದನ್ ರೈಡರ್ಸ್ ತಂಡಕ್ಕೆ ಟ್ರೋಫಿ ಮತ್ತು ನಗದು ನೀಡಲಾಯಿತು. ರನ್ನರ್ ಆಪ್ ಪ್ರಶಸ್ತಿಯನ್ನು ಗಣೇಶ್ ರೈ ಮಾಲಕತ್ವದ ಶ್ರೀ ಕೃಷ್ಣ ವಾರಿಯರ್ಸ್ ಪಡೆದುಕೊಂಡರೆ ಮೂರು ಮತ್ತು ನಾಲ್ಕನೇ ಸ್ಥಾನಿಯಾಗಿ ಅಮರ್ ರೈ ಮಾಲಕತ್ವದ ತುಳುನಾಡ್ ವಾರಿಯರ್ಸ್ ಮತ್ತು ಸಂತೋಷ ರೈ ಇಳಂತಾಜೆ ಮಾಲಕತ್ವದ ಸಂಡೆ ಆಚಿವೇರರ್ಸ್ ಪಡೆದು ಕೊಂಡಿತು. ಪಂದ್ಯಾಟದಲ್ಲಿ ಬೆಸ್ಟ್ ಬ್ಯಾಟ್ಸಮನ್ ಮತ್ತು ಮ್ಯಾನ್ ಅಫ್ ದ ಸೀರೀಸ್ ರಮಣ್ ಪಾಲಾದರೆ, ಬೆಸ್ಟ್ ಬೌಲರ್ ಯಶವಂತ ಗುತ್ತು ಹಾಗೂ ಫೈನಲ್ ಪಂದ್ಯಾಟದ ಪಂದ್ಯ ಪುರುಷ ವಿನ್ನರ್ಸ್ ತಂಡದ ಗಣೇಶ್ ರೈ ಪಡೆದುಕೊಂಡರು.

LEAVE A REPLY

Please enter your comment!
Please enter your name here