ಪುತ್ತೂರು: 8 ವರ್ಷಗಳ ಹಿಂದೆ ಹಳೆನೇರಂಕಿ ಗ್ರಾಮದ ಬೈಲಂಗಡಿ ಎಂಬಲ್ಲಿ ತಂಡವೊಂದು ಮನೆಗೆ ಕಲ್ಲು ಬಿಸಾಡಿ ಹಾನಿಗೊಳಿಸಿದ್ದಲ್ಲದೆ ಯುವಕನಿಗೆ ಗಾಯಗೊಳಿಸಿದ ಪ್ರಕರಣದ 5 ಮಂದಿ ಆರೋಪಿಗಳನ್ನು ಪುತ್ತೂರು ನ್ಯಾಯಾಲಯ ದೋಷ ಮುಕ್ತಗೊಳಿಸಿ ತೀರ್ಪು ನೀಡಿದೆ.
2015ರ ಅ.9 ರಂದು ಹಳೆನೇರಂಕಿ ಗ್ರಾಮದ ಬೈಲಂಗಡಿ ಕಾಸಿಂ ಎಂಬವರ ಮನೆ ಮುಂದೆ ತಂಡವೊಂದು ಅವಾಚ್ಯ ಶಬ್ದಗಳಿಂದ ಬೈದು, ಕಲ್ಲು ಬಿಸಾಡಿದ್ದಾರೆ. ಈ ವೇಳೆ ಮನೆಯೊಳಗಿದ್ದ ಕಾಸಿಂ ಎಂಬವರ ಪುತ್ರ ಮೊಹಮ್ಮದ್ ಸಾಬೀರ್ (19ವ) ಅವರಿಗೆ ಕಿಟಕಿಗೆ ಬಿದ್ದ ಕಲ್ಲಿನಿಂದ ಗಾಜು ಹುಡಿಯಾಗಿ ಗಾಜಿನ ಚೂರು ಮುಖ, ತಲೆಗೆ ತಾಗಿತ್ತು. ಇದೇ ಸಂದರ್ಭದಲ್ಲಿ ಮನೆಯಲ್ಲಿದ್ದ ಅವರ ತಾಯಿ ಮತ್ತು ಅಕ್ಕ ಪುತ್ತೂರು ಆಸ್ಪತ್ರೆಗೆ ಮೊಹಮ್ಮದ್ ಸಾಬೀರ್ ಅವರನ್ನು ದಾಖಲಿಸಿದ್ದರು.
ಘಟನೆ ಕುರಿತು ಆರೋಪಿಗಳಾದ ರಘು ಅಲಂತಾಯ, ಶ್ರೀಕಾಂತ್, ತ್ರಿವಿನ್ ಆಲಂತಾಯ, ತಾರಾನಾಥ ಶಾಂತಿನಗರ, ಮೂಲಚಂದ್ರ ಅವರ ವಿರುದ್ಧ ಕಡಬ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳನ್ನು ದೋಷಮಕ್ತಗೊಳಿಸಿದೆ. ಆರೋಪಿಗಳ ಪರವಾಗಿ ನ್ಯಾಯವಾದಿ ಮಾದವ ಪೂಜಾರಿ, ಸಂದೇಶ್ ನಟ್ಟಿಬೈಲ್ ವಾದಿಸಿದರು.