ಉತ್ತರ ಪ್ರದೇಶ: ರಾತ್ರಿಪೂರ್ತಿ ಕೋಣೆಯಲ್ಲಿ ಗ್ಯಾಸ್ ಹೀಟರ್ ಆನ್ ಮಾಡಿ ಮಲಗಿದ್ದ ಒಂದೇ ಕುಟುಂಬದ 4 ಮಂದಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಇಲ್ಲಿನ ಸೀತಾಪುರ ಝಜರ್ ಪ್ರದೇಶದ ಮದರಸದಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ಆಸೀಫ್ (35) ಪತ್ನಿ, ಶಗುಫ್ತಾ (32) ಮಕ್ಕಳಾದ ಝಯ್ದ್ (3) ಮೈರಾ (2) ಮೃತ ದುರ್ದೈವಿಗಳು.
ಬೆಳಿಗ್ಗೆ ಹಾಲಿನವನು ಬಂದು ಬಾಗಿಲು ಬಡಿದಾಗ ಯಾರೂ ಬಾಗಿಲು ತೆರೆಯದ ಕಾರಣ ಸಂಶಯ ಪಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಬಾಗಿಲು ಒಡೆದು ನೋಡಿದಾಗ 4 ಮಂದಿ ಮೃತ ಪಟ್ಟಿರುವುದು ಬೆಳಕಿಗೆ ಬಂದಿದೆ.