ಅಧ್ಯಕ್ಷರಾಗಿ ನಾಸಿರ್ ಎಂ.ಕೆ; ಪ್ರ.ಕಾರ್ಯದರ್ಶಿ ಶಫೀಕ್ ಪುಣಚ
ಪುತ್ತೂರು: ಖಿಳ್ರಿಯಾ ಮಸೀದಿ ಹಾಗೂ ಮದ್ರಸ ಜಿಸ್ತಿಯಾ ನಗರ ಪುಣಚ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಪಾಲಸ್ತಡ್ಕ ಗಲ್ಫ್ ಕಮಿಟಿ ಇದರ 2023-24ರ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ನಾಸಿರ್ ಎಂ.ಕೆ(ಯುಎಇ) ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಫೀಕ್ ಪುಣಚ(ಯುಎಇ) ಅವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಸುಲೈಮಾನ್ ಮುಸ್ಲಿಯಾರ್, ಉಪಾಧ್ಯಕ್ಷರಾಗಿ ರಝಾಕ್ ಮೂಡಾಯಿಬೆಟ್ಟು(ಖತಾರ್), ಜೊತೆ ಕಾರ್ಯದರ್ಶಿಗಳಾಗಿ ನೌಷಾದ್ ಏರ್ನಕಟ್ಟೆ(ಯುಎಇ) ಹಾಗೂ ರಝಾಕ್ ಪಾಲಸ್ತಡ್ಕ(ಕೆಎಸ್ಎ), ಲೆಕ್ಕ ಪರಿಶೋಧಕರಾಗಿ ಹೈದರ್ ಏರ್ನಕಟ್ಟೆ(ಕೆಎಸ್ಎ) ಹಾಗೂ ಕೋಶಾಧಿಕಾರಿಯಾಗಿ ರಫೀಕ್ ಎಂ.ಕೆ(ಯುಎಇ) ಅವರನ್ನು ಆಯ್ಕೆ ಮಾಡಲಾಯಿತು.
ಖಿಳ್ರಿಯಾ ಮಸೀದಿ ಜಿಸ್ತಿಯಾ ನಗರ ಇದರ ಅಡಿಯಲ್ಲಿ ಈ ಸಮಿತಿಯು ಕಾರ್ಯಾಚರಿಸುತ್ತಿದ್ದು ಇದು ಗಲ್ಫ್ ರಾಷ್ಟ್ರಗಳಲ್ಲಿ ಅನಿವಾಸಿ ಭಾರತೀಯರಾಗಿ ಕೆಲಸ ನಿರ್ವಹಿಸುತ್ತಿರುವ ಊರಿನ ಹಲವಾರು ಗಲ್ಫ್ ಪ್ರವಾಸಿಗಳ ಒಕ್ಕೂಟವಾಗಿದೆ. ಪ್ರಸ್ತುತ ಹಲವಾರು ಸಮಾಜಮುಖಿ ಕೆಲಸಕಾರ್ಯಗಳೊಂದಿಗೆ ಈ ಸಮಿತಿಯು ಮುನ್ನಡೆಯುತ್ತಿದೆ.