ಇಂಡೋನೇಷ್ಯಾ : ತಾನಿಂಬರ್ ಪ್ರದೇಶದಲ್ಲಿ ಬೆಳಗಿನ ಜಾವ ಪ್ರಬಲಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 7.7 ರಷ್ಟು ದಾಖಲಾಗಿದೆ ಎಂದು ಯುರೋಪಿಯನ್ ಮೆಡಿಟೇರೇನಿಯನ್ ನಿಸ್ಮೂಲಜಿಕಲ್ ಸೆಂಟರ್ ತಿಳಿಸಿದ್ದು ಭೂಮಿಯ 97 ಕಿಲೋ ಮಿಟರ್ ಆಳದಲ್ಲಿ ಈ ಕಂಪನ ಸಂಭವಿಸಿದೆ ಎಂದು ಹೇಳಿದೆ. ಸರಕಾರ ಸುನಾಮಿ ಎಚ್ಚರಿಕೆ ನೀಡಿ ಸಮುದ್ರ ಮಟ್ಟದಲ್ಲಿ ಯಾವುದೇ ಬದಲಾವಣೆ ಕಂಡು ಬಾರದ ಹಿನ್ನೆಲೆಯಲ್ಲಿ ಎಚ್ಚರಿಕೆ ವಾಪಾಸ್ ಪಡೆದಿದೆ.