ಲಕ್ನೋ : ಪಠಾಣ್ ಚಿತ್ರ ಜ.25ರಂದು ಬಿಡುಗಡೆಯಾಗಲಿದ್ದು ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು, ಹಲವು ಹಿಂದೂ ಸಂಘಟನೆಗಳ ಆಕ್ಷೇಪಕ್ಕೆ ಕಾರಣವಾಗಿದೆ. ಚಿತ್ರಮಂದಿರದಲ್ಲಿ ಈ ಚಿತ್ರವನ್ನು ಪ್ರದರ್ಶಿಸದಂತೆ ತಡೆಯಲಾಗುವುದು ಎಂದು ಸಂಘಟನೆಗಳು ಹೇಳಿದೆ.
ಈ ನಡುವೆ ಮನೋರಂಜನೆಯ ಹೆಸರಿನಲ್ಲಿ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ಚಲನಚಿತ್ರಗಳು ಮತ್ತು ಒಟಿಟಿ ವೆಬ್ ಸೀರಿಸ್ ಗಳನ್ನು ವಿಮರ್ಶಿಸುವ ಸಲುವಾಗಿ ಜ್ಯೋತಿಷ್ ಪೀಠ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಧರ್ಮ ಸೆನ್ಸಾರ್ ಮಂಡಳಿ ಸ್ಥಾಪಿಸಿದ್ದಾರೆ. ಬೇಷರಂ ರಂಗ್ ಹಾಡಿನ ವಿವಾದದ ಬೆನ್ನಲ್ಲೇ ಅಸ್ತಿತ್ವಕ್ಕೆ ಬಂದಿರುವ ಧರ್ಮ ಸೆನ್ಸಾರ್ ಬೋರ್ಡ್ ನಲ್ಲಿ 10 ಮಂದಿ ಸದಸ್ಯರಿದ್ದಾರೆ ಎನ್ನಲಾಗಿದೆ. ಇದರ ಕೇಂದ್ರ ಕಛೇರಿ ಧರ್ಮಶೋಧನಾ ಸವಾಲಯ ಜ.15ರಂದು ದೆಹಲಿಯಲ್ಲಿ ಉದ್ಘಾಟನೆಗೊಳ್ಳಲಿದೆ. ವಿವಿಧ ರಾಜ್ಯಗಳಲ್ಲಿ ಕಛೇರಿಯನ್ನು ಹೊಂದಲಿರುವ ಮಂಡಳಿ ಚಲನಚಿತ್ರ, ವೆಬ್ ಸಿರಿಸ್. ಟೀವಿ ಧಾರವಾಹಿ ಮತ್ತು ಶಾಲಾ ಪಠ್ಯಗಳನ್ನು ಸೂಕ್ಷ್ಮವಾಗಿ ಪರಶೀಲಿಸಲಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.