ಪುತ್ತೂರು: ರಸ್ತೆ ಅಗಲೀಕರಣಕ್ಕಾಗಿ ಟಿಸಿ ಸ್ಥಳಾಂತರ, ವಿದ್ಯುತ್ ಲೈನ್ ನಿರ್ವಹಣಾ ಹಾಗೂ ತುರ್ತು ಕಾಮಗಾರಿ ನಿಮಿತ್ತ 110/33/11 ಕೆ.ವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಎಕ್ಸ್ಪ್ರೆಸ್, ಕಾಂಚನ, ವಾಟರ್ ಸಪ್ಲೈ, ರಾಮಕುಂಜ ಮತ್ತು ಉಪ್ಪಿನಂಗಡಿ ಓಲ್ಡ್ ಫೀಡರ್ ಹಾಗೂ 110/33/11ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಕೆಮ್ಮಾರ/ಉಪ್ಪಿನಂಗಡಿ ಟೌನ್ ಫೀಡರ್ನಲ್ಲಿ ಜ.12ರಂದು ಪೂರ್ವಾಹ್ನ 10ರಿಂದ ಅಪರಾಹ್ನ 6ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. 110/33/11 ಕೆ.ವಿ ಪುತ್ತೂರು ಹಾಗೂ 110/33/11ಕೆವಿ ಕರಾಯ ವಿದ್ಯುತ್ ಕೇಂದ್ರದಿಂದ ಹೊರಡುವ ಫೀಡರ್ನಿಂದ ವಿದ್ಯುತ್ ಸರಬರಾಜಾಗುವ ಉಪ್ಪಿನಂಗಡಿ ಟೌನ್, ಮಠ, ಬಜತ್ತೂರು, ರಾಮಕುಂಜ, ಹಿರೇಬಂಡಾಡಿ, ಕೋಡಿಂಬಾಡಿ, ಶಾಂತಿನಗರ, ಮಲ್ಲೇಲು, ಕಟಾರ ಮತ್ತು ಬೆಳ್ಳಿಪ್ಪಾಡಿ ಗ್ರಾಮದ ವಿದ್ಯುತ್ ಬಳಕೆದಾರರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.