ಉತ್ತರ ಪ್ರದೇಶ : ಇದು ಯಾವುದೇ ಸಿನೆಮಾದ ಕಥೆಯಲ್ಲ ಉತ್ತರ ಪ್ರದೇಶದ ಮಹರಾಜ್ ಗಂಜ್ ನಲ್ಲಿ ನಡೆದಿರುವ ಸತ್ಯ ಘಟನೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. 8ನೇ ತರಗತಿಯ ವಿದ್ಯಾರ್ಥಿಯೊಬ್ಬ 6ನೇ ತರಗತಿಯ ವಿದ್ಯಾರ್ಥೀನಿಯ ಮನೆಗೆ ಸ್ನೇಹಿತರೊಂದಿಗೆ ಬೈಕ್ ನಲ್ಲಿ ಬಂದು ಒಬ್ಬನೇ ಒಳಗೆ ನುಗ್ಗಿ ಕಸ ಗುಡಿಸುತ್ತಿದ್ದ ವಿದ್ಯಾರ್ಥಿನಿಯ ಕುತ್ತಿಗೆಗೆ ಚಾಕು ಇಟ್ಟು ಆಕೆಯ ಹಣೆಗೆ ಕುಂಕುಮ ಇಟ್ಟಿದ್ದಾನೆ. ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕಾಂಪೌಂಡ್ ಹಾರಿ ಮನೆಗೆ ನುಗ್ಗಿದ ಬಾಲಕ ಹುಡಿಗಿಯ ಹಣೆಗೆ ಕುಂಕುಮ ಇಟ್ಟಿದ್ದಾನೆ ಆಕೆ ಕಿರುಚಾಡಲು ಸುರು ಮಾಡಿದಾಗ ಅಲ್ಲಿಂದ ನೈಸ್ ಆಗಿ ಎಸ್ಕೇಪ್ ಆಗಿದ್ದಾನೆ. ಬಾಲಕೀಯ ತಂದೆ ನೀಡದ ದೂರಿನ ಆದಾರದ ಮೇಲೆ 16 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ಬಾಲಪರಾಧಿ ಗೃಹದಲ್ಲಿ ಇರಿಸಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಈ ಬಾಲಕ ಆಕೆಯನ್ನು ಹಿಂಬಾಲಿಸಿ ಪ್ರೇಮ ಬಿಕ್ಷೆಗಾಗಿ ನಿರಂತರವಾಗಿಪೀಡಿಸುತ್ತಿದ್ದ ಎನ್ನಲಾಗಿದೆ.ಆಕೆಯ ಹೆತ್ತವರು ಈತನ ಕಿರುಕುಳವನ್ನು ತಾಳಲಾರದೆ ಬಾಲಕಿಯನ್ನು ಬೇರೆ ಶಾಲೆಗೆ ಸೇರಿಸಿದರು ಈತ ಕೃತ್ಯ ಮುಂದುವರಿಸಿದ್ದ ತನ್ನ ಕೃತ್ಯಕ್ಕೆ ಆತ ಯಾವುದೇ ಪಶ್ಚತ್ತಾಪ ವ್ಯಕ್ತಪಡಿಸಿಲ್ಲ.