ಉಪ್ಪಿನಂಗಡಿ: ಅರಫಾ ವಿದ್ಯಾಕೇಂದ್ರ ಉಪ್ಪಿನಂಗಡಿಯಲ್ಲಿ ’ಗ್ರಾಂಡ್ ಪೇರೆಂಟ್ಸ್ ಡೇ ’ ಜ.11ರಂದು ನಡೆಯಿತು.
ಬೆಳಿಗ್ಗೆ ಶಾಲಾ ಸಂಚಾಲಕರಾದ ಹಾಜಿ ಕೆ.ಪಿ.ಎ.ಸಿದ್ದೀಕ್ ಹಾಗೂ ಹಾಜ್ರಾ ದಂಪತಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿರಿಯರಿಗೆ, ಶಾಲಾ ಪೋಷಕರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಸಲಾಯಿತು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಹಿರಿಯರಾದ ಉಮ್ಮರ್ ಕುಂಞಿ ನಾಡ್ಜಾ ಉಜಿರೆ ಅವರು, ಇಂದಿನ ಪೀಳಿಗೆಗೆ ಇಂತಹ ಕಾರ್ಯಕ್ರಮಗಳ ಅಗತ್ಯವಿದೆ. ಈ ಕಾರ್ಯಕ್ರಮ ಮಕ್ಕಳು ಮತ್ತು ಹಿರಿಯರ ನಡುವೆ ಬಾಂಧವ್ಯ ಹೆಚ್ಚಿಸುತ್ತದೆ ಎಂದರು. ಇನ್ನೋರ್ವ ಹಿರಿಯರಾದ ಮಹಮ್ಮದ್ ಹಾಜಿ ನೆಕ್ಕಿಲಾಡಿಯವರು ಮಾತನಾಡಿ, ಈಗಿನ ಮಕ್ಕಳಿಗೆ ತಮ್ಮ ಅಜ್ಜ ಹಾಗೂ ಅಜ್ಜಿಯರ ಜೊತೆಗೂಡಿ ಸಮಯ ಕಳೆಯುವ ಅವಕಾಶ ಕಡಿಮೆಯಾಗುತ್ತಿದೆ. ಇಂದು ಇಲ್ಲಿ ನಡೆದ ಕಾರ್ಯಕ್ರಮದ ಮೂಲಕ ನಮಗೆ ನಮ್ಮ ಬಾಲ್ಯ ಜೀವನದ ಸವಿನೆನಪುಗಳು ಮರುಕಳಿಸಿತು. ಈ ಕಾರ್ಯಕ್ರಮದ ಮೂಲಕ ಕೂಡು ಕುಟುಂಬದ ಪರಿಕಲ್ಪನೆ ಪುನಹ ಮರುಕಳಿಸಲಿ ಎಂದರು.
ಮುಖ್ಯ ಶಿಕ್ಷಕರಾದ ಹಬೀಬ್ ಅಗ್ನಾಡಿ ಮಾತನಾಡಿ, ಹಿರಿಯರು ಹಾಗೂ ಪೋಷಕರು ಸದಾ ಶಾಲೆಯ ಸಂಪರ್ಕದಲ್ಲಿದ್ದು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನೆರವಾಗಬೇಕೆಂದು ಹೇಳಿದರು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶಾಲಾ ಸಂಚಾಲಕ ಹಾಜಿ ಕೆ.ಪಿ.ಎ.ಸಿದ್ದೀಕ್ರವರು ಬಹುಮಾನ ವಿತರಣೆ ಮಾಡಿದರು. ಶಾಲಾ ಶಿಕ್ಷಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು. ಪವಿತ್ರಾ ಸ್ವಾಗತಿಸಿ, ತಬ್ಸೀರಾ ವಂದಿಸಿದರು. ಎಲ್ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶರೀಕ್ ಅರಫಾ, ಶಾಲಾ ಆಡಳಿತ ಮಂಡಳಿ ಸದಸ್ಯರು, ಸಹಶಿಕ್ಷಕ ಸಚಿನ್, ಶಾಲಾ ಸಿಬ್ಬಂದಿಗಳು ಸಹಕರಿಸಿದರು.