ಪತೇಹಬಾದ್ : 120 ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ವಿಡಿಯೋ ಮಾಡಿದ್ದ ಪತೇಹಬಾದ್ ತೊಹಾನದ ಬಾಲಕ್ ನಾಥ್ ದೇವಸ್ಥಾನದ ಮಹಂತ್ (63 ವ.) ಪ್ರಾಯದ ಬಾಬಾ ಅಮರಪುರಿ ಅಲಿಯಾಸ್ ಜಲೇಬಿ ಬಾಬಾನನ್ನು ಪತೇಹಬಾದ್ ತ್ವರಿತಗತಿ ನ್ಯಾಯಲಯಾ ತಪ್ಪಿತಸ್ಥನೆಂದು ಹೇಳಿದ್ದು 14 ವರ್ಷ ಜೈಲು ಶಿಕ್ಷೆ ಘೋಷಿಸಿದೆ.
ಜಲೇಬಿ ಬಾಬಾನನ್ನು 2018 ರಲ್ಲಿ ಪತೇಹಬಾದ್ನ ಶಕ್ತಿನಗರದ ನಿವಾಸದಿಂದ ಬಂದಿಸಲಾಗಿತ್ತು. ಸಂತ್ರಸ್ಥೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ವಿಡಿಯೋ ಮಾಡಿ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ ಈತನ ಮನೆಯಿಂದ ಸಿಡಿಯನ್ನು ಪೋಲಿಸರು ವಶಪಡಿಸಿಕೊಂಡಿದ್ದರು. ಮಾತ್ರವಲ್ಲಈತನ ಮೊಬೈಲಿನಲ್ಲಿ 120 ಅಶ್ಲೀಲ ವಿಡಿಯೋ ಕೂಡ ದೊರಕಿತ್ತು.13 ವರ್ಷಗಳಿಂದ ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿ ಜಲೇಬಿ ಮಾರುತಿದ್ದ ಈತ ಆ ಬಳಿಕ ವ್ಯಾಪಾರ ನಿಲ್ಲಿಸಿ ಬಾಟಿಯಾ ನಗರದಲ್ಲಿ ಮನೆ ಖರೀದಿಸಿ ತಳ ಅಂತಸ್ತಿನಲ್ಲಿ ದೇವಸ್ಥಾನ ನಿರ್ಮಿಸಿದ್ದ . ಈತನ ಲೈಂಗಿಕ ದೌರ್ಜನ್ಯದ ವಿಡಿಯೋಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡ ಬಳಿಕ ಪೋಲಿಸರು ಈತನನ್ನು ಬಂದಿಸಿದ್ದರು .2017ರಲ್ಲಿ ವಿವಾಹಿತ ಮಹಿಳೆಯೊಬ್ಬರು ಮೊದಲ ಬಾರಿ ಈತನ ವಿರುದ್ದ ದೂರು ದಾಖಲಿಸಿದ್ದರೂ ಜಾಮೀನು ಪಡೆದು ಹೊರಬಂದಿದ್ದ.