ಸುದಾನ ವಸತಿ ಶಾಲೆ ರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ರಾಜ್ಯ ಮಟ್ಟಕ್ಕೆ

0

ಪುತ್ತೂರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳು ಜಂಟಿಯಾಗಿ ಜಿಲ್ಲಾಮಟ್ಟದಲ್ಲಿ ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯಲ್ಲಿ 9 ಜನವರಿ 2023 ರಂದು ಆಯೋಜಿಸಿದ್ದ 30ನೇ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಸುದಾನ ವಸತಿ ಶಾಲೆಯ ಎರಡು ವಿದ್ಯಾರ್ಥಿ ತಂಡಗಳು ಭಾಗವಹಿಸಿದ್ದವು.

ಕಿರಿಯರ ವಿಭಾಗದಲ್ಲಿ ಜೆನ್ನಿ ಡುಂಗ್ ಡುಂಗ್ ( ಬಿಪಿನ್ ಕಿಶೋರ್ ಡುಂಗ್ ಡುಂಗ್ ಹಾಗೂ ಸರೋಜಿನಿ ಡುಂಗ್ ಡುಂಗ್ ಅವರ ಪುತ್ರಿ) ಮತ್ತು ಅನಘಾ. ವಿ ( ಸೂರ್ಯನಾರಾಯಣ. ವಿ ಹಾಗೂಸತ್ಯಪೂರ್ಣ.ಕೆ ಅವರ ಪುತ್ರಿ). ಇವರು ಪ್ರಸ್ತುತ ಪಡಿಸಿದ ‘ಕಾಟು ಗುಲಾಬಿ’ ಗಿಡದ ಎಲೆಗಳಿಂದ ತಯಾರಿಸಿದ ‘ಜೈವಿಕ ಕೀಟನಾಶಕ’ ಯೋಜನೆಯು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ..

ಶಾಲಾ ವಿಜ್ಞಾನ ಶಿಕ್ಷಕರಾದ  ಪುಷ್ಪಶ್ರೀ. ಆರ್.ಎಸ್,  ರೀನಾ ಅಲೆಕ್ಸ್,  ಸಾಧನ ಹೆಬ್ಬಾರ್ ಮಾರ್ಗದರ್ಶನ ನೀಡಿರುತ್ತಾರೆ. ಹಿರಿಯರ ವಿಭಾಗದಲ್ಲಿ ಜಿಯಾ ಸ್ವೀಡಲ್ ಲಸ್ರಾಡೋ ( ಪ್ಯಾಟ್ರಿಕ್ ಲಸ್ರಾಡೋ ಹಾಗೂ  ಅಮಿತಾ ಪೂನಮ್ ಅವರ ಪುತ್ರಿ) ಮತ್ತು ನಿಹಾರಿಕಾ ಎನ್ ರೈ ( ನಿರಂಜನ್ ರೈ ಎಮ್, ಹಾಗೂ  ರಶ್ಮಿ ಎನ್ ರೈ ಅವರ ಪುತ್ರಿ) ಇವರು ‘ಕೆಸುವಿನೆಲೆ’ಯಿಂದ ತಯಾರಿಸಲ್ಪಟ್ಟ ಜೈವಿಕ ಕೀಟನಾಶಕದ ಕ್ರಿಯಾ ಯೋಜನೆಯನ್ನು ಮಂಡಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಯೋಜನೆಗೆ  ನಿವೇದಿತಾ ಹಾಗೂ  ಸಾಧನಾ ಹೆಬ್ಬಾರ್ ಮಾರ್ಗದರ್ಶನ ನೀಡಿರುತ್ತಾರೆ. ಈ ಎರಡೂ ತಂಡದ ವಿದ್ಯಾರ್ಥಿಗಳು ಜನವರಿ 16 ರಿಂದ 18 ರ ವರೆಗೆ ಕಲುಬುರ್ಗಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇವರಿಗೆ ಸುದಾನ ಶಾಲಾ ಆಡಳಿತ ಮಂಡಳಿ, ಶಾಲಾ ಮುಖ್ಯೋಪಾಧ್ಯಾಯಿನಿ  ಶೋಭಾನಾಗರಾಜ್, ಶಿಕ್ಷಕ ವೃಂದದವರು ಶುಭ ಹಾರೈಸಿರುತ್ತಾರೆ.

LEAVE A REPLY

Please enter your comment!
Please enter your name here