ಪುತ್ತೂರು: ಕರಿಂಕ ಹೊಸಮನೆ ಕೆ.ಎನ್. ಕೇಶವ ಆಳ್ವರವರಿಗೆ ನುಡಿ ನಮನ ಮಂಗಳೂರು ಟಿ.ವಿ.ರಮಣ ಪೈ ಕನ್ವೆನ್ಷನ್ ಸೆಂಟರ್ನಲ್ಲಿ ಜ.12 ರಂದು ನಡೆಯಿತು.
ವಿಜಯಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಆಗಿ ವಿವಿಧ ಕಡೆ ಸೇವೆ ಸಲ್ಲಿಸಿ ನೌಕರರ ಯೂನಿಯನ್ ಕೋಶಾಧಿಕಾರಿಯಾಗಿ ನೌಕರರ ಹಿತವನ್ನು ಕಾಯ್ದ ಮಾನವೀಯ ವ್ಯಕ್ತಿ. ಬಂಧು ವರ್ಗದಲ್ಲಿ ಸಹೋದ್ಯೋಗಿಗಳಲ್ಲಿ ಆತ್ಮೀಯತೆಯನ್ನು ಹೊಂದಿ ತನ್ನ ಕುಟುಂಬ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ ಓರ್ವ ಆದರ್ಶ ವ್ಯಕ್ತಿ ಎಂದು ವಿಜಯಾ ಬ್ಯಾಂಕ್ ನಿವೃತ್ತ ಮ್ಯಾನೇಜರ್ ದಯಾನಂದ ಶೆಟ್ಟಿ ತಿಳಿಸಿದರು. ತನ್ನ ನಿವೃತ್ತಿಯ ನಂತರ ಊರಿನ ಸರಕಾರಿ ಶಾಲಾ ಅಭಿವೃದ್ಧಿಗೆ ಸಹಾಯ ಹಸ್ತವನ್ನು ಹಾಗೂ ಕೊರೋನಾ ಕಾಲದಲ್ಲಿ ಪುತ್ರರ ಜೊತೆ ಸೇರಿ ಊರಿನ ಬಡವರಿಗೆ ಕೊರೋನಾ ಕಿಟ್ ವಿತರಿಸಿದ ಮಾನವೀಯ ವ್ಯಕ್ತಿಯಾಗಿದ್ದರು. ಹಿರಿಯ ಕಿರಿಯ ಬಂಧುಗಳಿಗೆ ಓರ್ವ ಮಾರ್ಗದರ್ಶಕರಾಗಿದ್ದರು ಎಂದು ತಿಳಿಸಿದರು.
ಕೊಡಾಜೆ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿ ನುಡಿನಮನ ಸಲ್ಲಿಸಿದರು. ಸಹೋದರ ಕೆ.ಎನ್. ಗಂಗಾಧರ ಆಳ್ವ ಧನ್ಯವಾದ ಸಲ್ಲಿಸಿದರು. ಪುತ್ರರಾದ ಖ್ಯಾತ ರೊಬೋಟಿಕ್ ಶಸ್ತ್ರತಜ್ಞ ಡಾ| ಅಶ್ವಿನ್ ಆಳ್ವ, ಅನೂಪ್ ಆಳ್ವ, ಕೇಶವ ಆಳ್ವರ ಧರ್ಮಪತ್ನಿ ಶ್ರೀಮತಿ ಕೆ. ಆಳ್ವ ಉಪಸ್ಥಿತರಿದ್ದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವಿಶ್ವನಾಥ ರೈ, ಜಯರಾಮ ರೈ, ಮಾದೋಡಿ ಶ್ರೀಧರ ರೈ, ಕುಟುಂಬ ವರ್ಗ, ಅಪಾರ ಬಂಧುವರ್ಗ ಹಾಗೂ ವಿಜಯಾ ಬ್ಯಾಂಕಿನ ನಿವೃತ್ತ ನೌಕರರು ಭಾಗವಹಿಸಿದ್ದರು.