ಪುತ್ತೂರು: ಕಬಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಲಾದ ಫಲಕ, ಬ್ಯಾನರ್, ಕಟೌಟ್ ಗಳನ್ನು ತೆರವುಗೊಳಿಸುವಂತೆ ಕಬಕ ಗ್ರಾ.ಪಂ ಸೂಚನೆ ನೀಡಿದೆ.
ಪಂಚಾಯತ್ ನಿಂದ ಅನುಮತಿ ಪಡೆದು ಅಳವಡಿಸಲಾಗಿರುವ ಜಾಹೀರಾತು ಬ್ಯಾನರ್ ಮತ್ತು ಕಟೌಟ್ ಹೊರತುಪಡಿಸಿ ಅನುಮತಿ ಇಲ್ಲದೆ ಅಳವಡಿಸಿರುವ ಜಾಹಿರಾತು ಫಲಕ, ಬ್ಯಾನರ್ ಮತ್ತು ಕಟೌಟ್ ಗಳಿಗೆ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಅಳವಡಿಸಲು ಅನುಮತಿ ಪಡೆಯಲು ಅರ್ಜಿ ಸಲ್ಲಿಸಿ ಶುಲ್ಕ ಪಾವತಿ ಮಾಡಬೇಕು. ತಪ್ಪಿದಲ್ಲಿ ಎಲ್ಲಾ ವಿಧದ ಅನಧಿಕೃತ ಜಾಹಿರಾತು ಫಲಕ, ಬ್ಯಾನರ್ ಹಾಗೂ ಕಟೌಟ್ ತೆರವುಗೊಳಿಸಲಾಗುವುದು. ಜನವರಿ 18 ರಂದು ಅನಧಿಕೃತ ಜಾಹೀರಾತು ಫಲಕ, ಬ್ಯಾನರ್ ಮತ್ತು ಕಟೌಟ್ ಗಳ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಕಬಕ ಗ್ರಾಮ ಪಂಚಾಯತ್ ಪ್ರಕಟಣೆ ತಿಳಿಸಿದೆ