ಪುತ್ತೂರು: ಸುದಾನ ಶಾಲೆಯಲ್ಲಿ DIET ಮತ್ತು ವಿಜ್ಞಾನ ಸಂಘ ಅವನಿಯ ಜಂಟಿ ಆಯೋಜನೆಯೊಂದಿಗೆ ವಿಜ್ಞಾನ ಕಾರ್ಯಗಾರ ಜ.12ರಂದು ನಡೆಯಿತು. ಮಂಗಳೂರಿನ Learning Links Foundation (NGO) ನ ಸಂಪನ್ಮೂಲ ವ್ಯಕ್ತಿಗಳಾದ ಸ್ವಾತಿ, ರೂಶಾಲಿ ಮತ್ತು ಹರ್ಷಿತಾರವರು ಆರನೇ ತರಗತಿಯ ವಿದ್ಯಾರ್ಥಿಗಳಿಗೆ ಆಹಾರ, ನೀರು ಮತ್ತು ಶಕ್ತಿಯ ವಿಷಯದಲ್ಲಿ ಚಟುವಟಿಕೆ ಆಧಾರಿತ ಕಾರ್ಯಗಾರವನ್ನು ನಡೆಸಿಕೊಟ್ಟರು.
ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಆಹಾರ, ನೀರು, ಶಕ್ತಿಯ ಸದ್ಬಳಕೆಯ ಬಗ್ಗೆ ಮಕ್ಕಳಿಗೆ ವಿವರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸ್ವಾತಿ ಕಾರ್ಯಗಾರದ ಉದ್ದೇಶವನ್ನು ತಿಳಿಸುತ್ತಾ ಜೀವನಾವಶ್ಯಕತೆಗಳಾದ ಆಹಾರ, ನೀರು, ಶಕ್ತಿಗಳ ಬಳಕೆ, ದುರ್ಬಳಕೆಯಿಂದಾಗುವ ಸಮಸ್ಯೆ ಮತ್ತು ಪರಿಹಾರದ ಬಗ್ಗೆ ದೃಶ್ಯ-ಮಾಧ್ಯಮ ಮತ್ತು ಗುಂಪು ಚಟುವಟಿಕೆಗಳನ್ನು ನಡೆಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಸಹಶಿಕ್ಷಕಿ ಪೂಜಾ ಎಂ. ವಿ ಅತಿಥಿಗಳನ್ನು ಸ್ವಾಗತಿಸಿದರು. ನಿರ್ಮಲಾ ಡಿ’ಸೋಜ ವಂದಿಸಿ, ಸಹ ಶಿಕ್ಷಕಿ ರೇಖಾಮಣಿ ಕಾರ್ಯಕ್ರಮ ನಿರೂಪಿಸಿದರು. ಅವನಿ ವಿಜ್ಞಾನ ಸಂಘದ ಸಂಯೋಜಕಿ ಪ್ರತಿಮಾ ಎನ್.ಜಿ ಉಪಸ್ಥಿತರಿದ್ದರು. ಶಾಲೆಯ ವಿಜ್ಞಾನ ಶಿಕ್ಷಕಿಯರು ಸಹಕರಿಸಿದರು.