ತುಡರ್ ಯುವಕ ಮಂಡಲದಿಂದ ಭಜನಾ ಕಾರ್ಯಕ್ರಮ
ಕಾವು: ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಒಂದು ತಿಂಗಳುಗಳ ಕಾಲ ನಡೆದ ಧನುಪೂಜಾ ಕಾರ್ಯಕ್ರಮವು ಜ.14ರಂದು ಬೆಳಿಗ್ಗೆ ಸಂಪನ್ನಗೊಂಡಿತು. ಬೆಳಿಗ್ಗೆ ಗಂಟೆ 4 ರಿಂದ 5.30ರವರೆಗೆ ಕಾವು ನನ್ಯ ತುಡರ್ ಯುವಕ ಮಂಡಲದ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ ನೆರವೇರಿತು. ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡರವರು ದೀಪ ಬೆಳಗಿಸಿ ಭಜನೆಗೆ ಚಾಲನೆ ನೀಡಿದರು. ದೇವಸ್ಥಾನದ ಪ್ರಧಾನ ಅರ್ಚಕ ಶಿವಪ್ರಸಾದ್ ಕಡಮಣ್ಣಾಯರವರು ಭಜನಾ ಸಂಘಕ್ಕೆ ಪ್ರಸಾದ ನೀಡಿ ಪ್ರಾರ್ಥಿಸಿದರು.
ಭಜನಾ ಕಾರ್ಯಕ್ರಮದಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷ ಶೇಷಪ್ಪ ಗೌಡ ಪರನೀರು, ಅಧ್ಯಕ್ಷ ಜಗದೀಶ ನಾಯ್ಕ ಆಚಾರಿಮೂಲೆ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ ನನ್ಯ, ಉಪಾಧ್ಯಕ್ಷ ಶ್ರೀಕುಮಾರ್ ಬಲ್ಯಾಯ, ಕೋಶಾಧಿಕಾರಿ ಹರೀಶ್ ಕೆರೆಮೂಲೆ, ಭಜನಾ ಸಂಘದ ಗೌರವಾಧ್ಯಕ್ಷ ರಾಮಣ್ಣ ನಾಯ್ಕ ಆಚಾರಿಮೂಲೆ, ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆ, ಕಾರ್ಯದರ್ಶಿ ಲಿಂಗಪ್ಪ ನಾಯ್ಕ ನನ್ಯ, ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಗಂಗಾಧರ ನಾಯ್ಕ, ಸುನಿಲ್ ನಿಧಿಮುಂಡ, ಸದಸ್ಯರಾದ ನಿರಂಜನ ರಾವ್, ರಮೇಶ್ ಗೌಡ, ಸಂದೇಶ್ ಚಾಕೋಟೆ, ಹರ್ಷಿತ್ ಎ.ಆರ್, ತಿರುಮಲೇಶ್, ಸುಜ್ಞಾನ ಮಕ್ಕಳ ಭಜನಾ ಸಂಘದ ಸದಸ್ಯರಾದ ಪ್ರೀತಿಕಾ ಚಾಕೋಟೆ, ಗೌತಮ್ ನನ್ಯರವರು ಭಾಗವಹಿಸಿದ್ದರು.