ಪುತ್ತೂರು: ಕೊಳ್ತಿಗೆ ಗ್ರಾಮದ ಬಾಯಂಬಾಡಿ ಶ್ರೀಷಣ್ಮುಖದೇವ ದೇವಸ್ಥಾನಕ್ಕೆ ನೂತನವಾಗಿ ನಿರ್ಮಾಣಗೊಂಡ ರಥವು ಜ.15ರಂದು ಸಂಜೆ ಆಗಮಿಸಲಿದೆ. ಮಧ್ಯಾಹ್ನ 2.30 ಗಂಟೆಗೆ ಕಾವು ಅಮ್ಚಿನಡ್ಕಕ್ಕೆ ಆಗಮಿಸಲಿದೆ. ಬಳಿಕ ವಾಹನ ಮೆರವಣಿಗೆಯ ಮೂಲಕ ಪೆರ್ಲಂಪಾಡಿಗೆ ಆಗಮಿಸಲಿದೆ. ನಂತರ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ರಥವು ಸಾಗಲಿದೆ. ಆಕರ್ಷಕ ಬೊಂಬೆ ಕುಣಿತ, ನಾಸಿಕ್ ಬ್ಯಾಂಡ್, ಕೀಳು ಕುದುರೆ, ಸಿಂಗಾರಿ ಮೇಳ, ಭಜನೆ, ಕುಣಿತ ಭಜನೆ, ಪೂರ್ಣಕುಂಭ ಸ್ವಾಗತದೊಂದಿಗೆ ದೇವಸ್ಥಾನಕ್ಕೆ ಆಗಮಿಸಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಿರಾಜ್ ಪಾಂಬಾರ್ ತಿಳಿಸಿದ್ದಾರೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.