ಕೆಮ್ಮಾಯಿಯಲ್ಲಿ 26 ನೇ ವಾರ್ಷಿಕೋತ್ಸವ, ಶನೈಶ್ಚರ ಗ್ರಹವೃತ ಕಲ್ಪೋಕ್ತ ಪೂಜೆ -ಧಾರ್ಮಿಕ ಸಭೆ

0

ದಾಖಲೆ ನಿರ್ಮಾಣದ ಕಾರ್ಯಕ್ರಮವಾಗಿ ಮೂಡಿದೆ – ಅಶೋಕ್ ಕುಮಾರ್ ರೈ
ನೆಮ್ಮದಿ, ಆರೋಗ್ಯಕ್ಕೆ ಪೂಜಾ ಕಾರ್ಯಕ್ರಮ ಅಗತ್ಯ – ಈಶ್ವರ ಭಟ್
ಯುವಕರ ಸಂಘಟನೆಯಿಂದ ಊರಿನ ಬೆಳವಣಿಗೆ -ರಾಜಶೇಖರ್ ಜೈನ್
ಕೆಮ್ಮಾಯಿ ಅಶ್ವತ್ಥಕಟ್ಟೆ ಪಾವಿತ್ರ್ಯತೆಯಿಂದ ಕೂಡಿದೆ – ಸುಂದರ ಪೂಜಾರಿ

ಪುತ್ತೂರು: ಕೆಮ್ಮಾಯಿ ಓಂ ಅಶ್ವತ್ಥಪುರ ಶ್ರೀ ವಿಷ್ಣು ಯುವಕ ಮಂಡಲದ 26 ನೇ ವರ್ಷದ ವಾರ್ಷಿಕೋತ್ಸವ ಮತ್ತು ಶನೈಶ್ಚರ ಗ್ರಹವೃತ ಕಲ್ಪೋಕ್ತ ಪೂಜೆಯ ಅಂಗವಾಗಿ ಜ.15ರಂದು ರಾತ್ರಿ ಧಾರ್ಮಿಕ ಸಭೆ ನಡೆಯಿತು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಬೆಣ್ಣೆಮನೆ ಗೋಪಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಹಲವು ವರ್ಷಗಳಿಂದ ಕಾರ್ಯಕ್ರಮ ನಡೆಯುತ್ತಿದ್ದು, ಈ ಭಾರಿಯು ಬೆಳಗ್ಗಿನಿಂದ ಸಂಜೆಯ ತನಕ ವಿಜೃಂಭಣೆಯಿಂದ ನಡೆದಿದೆ.

ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಕೋಡಿಂಬಾಡಿ ರೈ ಎಸ್ಟೇಟ್‌ನ ಉದ್ಯಮಿ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ಕೆಮ್ಮಾಯಿಯ ಅಶ್ವತ್ಥ ಮರದ ಕಟ್ಟೆಯ ಕೆಳಗಡೆ ಮಾಡುವ ಎಲ್ಲಾ ಕಾರ್ಯಕ್ರಮಗಳು ದಾಖಲೆ ನಿರ್ಮಾಣ ಮಾಡಿದೆ. ಮೊಸರು ಕುಡಿಕೆಯಿಂದ ಹಿಡಿದು ಇಲ್ಲಿ ನಡೆದ ಹಲವು ಕಾರ್ಯಕ್ರಮ ಯಶಸ್ವಿಯಾಗಿದೆ. ಕಷ್ಟದಲ್ಲಿರುವಾಗ ಸಹಾಯ ಮಾಡುವವರು ನಿಜವಾದ ಬಂಧು ಎಂಬಂತೆ ಇಲ್ಲಿ ಜಾತಿ ಮತ ಬೇಧವಿಲ್ಲದೆ ಸೌಹಾರ್ದ ರೀತಿಯಲ್ಲಿ ನಡೆಯುತ್ತಿರುವ ಶಿಸ್ತಿನ ಕಾರ್ಯಕ್ರಮ ಮಾದರಿಯಾಗಿದೆ. ಮಕ್ಕಳಿಗೆ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರೇರಣೆ ನೀಡಬೇಕು. ಆ ಮೂಲಕ ಸಂಸ್ಕಾರ, ಸಂಸ್ಕೃತಿ ಬೆಳೆಯಲು ಅವಕಾಶ ಸಿಗುತ್ತದೆ ಎಂದರು.

ನೆಮ್ಮದಿ, ಆರೋಗ್ಯಕ್ಕೆ ಪೂಜಾ ಕಾರ್ಯಕ್ರಮ ಅಗತ್ಯ:
ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ಮಾತನಾಡಿ, ಜೀವನದಲ್ಲಿ ಬೇಕಾಗುವ ನೆಮ್ಮದಿ ಮತ್ತು ಆರೋಗ್ಯಕ್ಕೆ ಇಂತಹ ಪೂಜಾ ಕಾರ್ಯಕ್ರಮದ ಅಗತ್ಯವಿದೆ. ಪರಿಸರ, ಸಂಸ್ಕೃತಿ, ಗೋ ಸಂತತಿ ಉಳಿಯಬೇಕು ಎಂದು ಹೇಳಿದರು.

ಯುವಕರ ಸಂಘಟನೆಯಿಂದ ಊರಿನ ಬೆಳವಣಿಗೆ:
ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ರಾಜಶೇಖರ್ ಜೈನ್ ಅವರು ಮಾತನಾಡಿ, ಕೆಮ್ಮಾಯಿಯ ಯುವಕರ ಸಂಘಟನೆ ಊರಿನ ಅಭಿವೃದ್ಧಿಗೆ ಪೂರಕವಾಗಿ ಬೆಳೆದಿದೆ. ಸೌಹಾರ್ದ ರೀತಿಯಲ್ಲಿರುವ ಇಂತಹ ಸಂಘಟನೆಯಿಂದ ಇವತ್ತು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಕೆಮ್ಮಾಯಿ ಅಶ್ವತ್ಥಕಟ್ಟೆ ಪಾವಿತ್ರ್ಯತೆಯಿಂದ ಕೂಡಿದೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು ಅವರು ಮಾತನಾಡಿ, ಕೆಮ್ಮಾಯಿ ಅಶ್ವತ್ಥ ಕಟ್ಟೆಗೆ ಬಹಳ ಪಾವಿತ್ರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇಲ್ಲಿ ವಿಜೃಂಭಣೆಯಿಂದ ಕಾರ್ಯಕ್ರಮ ನಡೆಯುತ್ತಿದೆ. ಮುಂದೆಯೂ ಇಲ್ಲಿ ನಿರಂತರ ಕಾರ್ಯಕ್ರಮ ಭಕ್ತಿ ಪ್ರದಾನವಾಗಿ ನಡೆಯಲಿ ಎಂದರು.

ಸನ್ಮಾನ:

ಶನೈಶ್ಚರ ಪೂಜೆ ಸಂದರ್ಭದಲ್ಲಿ ಪ್ರತಿ ವರ್ಷ ಉತ್ತಮ ಸೇವೆ ಮಾಡುತ್ತಿರುವ ಚಿದಂಬರ ನಾಯ್ಕ್ ಕೆಮ್ಮಾಯಿ ಅವರನ್ನು ಅವರ ಅನುಪಸ್ಥಿತಿಯಲ್ಲಿ ಅವರ ಸಹೋದರ ಸುಧಾಕರ ನಾಯ್ಕ್, ಹುಲಿ ವೇಷದ ಮೂಲಕ ಭಕ್ತಿಯ ಮಾರ್ಗವನ್ನು ತೋರಿಸುತ್ತಿರುವ ರಾಧಾಕೃಷ್ಣ ಶೆಟ್ಟಿ ( ಪಿಲಿ ರಾಧ), ಪ್ರಗತಿಪರ ಕೃಷಿಕ ಶಿವಾನಂದ ನಾಯಕ್ ಪಾದೆ, ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕೊರಗಪ್ಪ ಮಡಿವಾಳ ಅವರನ್ನು ಸನ್ಮಾನಿಸಲಾಯಿತು. ವಿದ್ಯಾಭಾರತಿಯಿಂದ ನಡೆದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಕೃಪಾಲ್, ಸಚಿನ್, ದೀಕ್ಷಿತ್ ಅವರನ್ನು ಗೌರವಿಸಲಾಯಿತು.

ನಗರಸಭೆ ಸ್ಥಳೀಯ ಸದಸ್ಯೆ ಲೀಲಾವತಿ, ಡಾ.ನಾರಾಯಣ ಭಟ್, ವಿಷ್ಣು ಭಜನಾ ಮಂಡಳಿ ಅಧ್ಯಕ್ಷೆ ಉಮಾವತಿ, ಉದ್ಯಮಿ ಗುರುಪ್ರಸಾದ್ ಪ್ರಭು, ವಿಷ್ಣು ಯುವಕ ಮಂಡಲದ ಅಧ್ಯಕ್ಷ ಪ್ರವೀಣ್ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಷ್ಣು ಯುವಕ ಮಂಡಲದ ಗೌರವ ಅಧ್ಯಕ್ಷ ಚಿದಾನಂದ ರೈ, ರಕ್ಷಿತ್, ಧನು ಪ್ರಸಾದ್, ವಿಘ್ನೇಶ್, ಸಂತೋಷ್ ಶೆಟ್ಟಿ ಬಡಾವು, ಚಂದ್ರಶೇಖರ್ ಗೌಡ ಮೆಸ್ಕಾಂ, ಕವಿತಾ, ಹರ್ಷಿತ್ , ರಕ್ಷಿತ್, ಶಾಲಿನಿ, ಚಿದಾನಂದ ರೈ, ಅಣ್ಣಿಪೂಜಾರಿ, ಅಶೋಕ್ ನಗರಸಭೆ, ನಾಗೇಶ್ ಕೆಮ್ಮಾಯಿ, ಪ್ರಶಾಂತ್, ರಾಜೇಶ್, ಜನಾರ್ದನ, ಉಮೇಶ್ ಕೆಮ್ಮಾಯಿ ಅತಿಥಿಗಳನ್ನು ಗೌರವಿಸಿದರು. ನಮಿತಾ ಪ್ರಾರ್ಥಿಸಿದರು. ಮಂಜುನಾಥ್ ಸ್ವಾಗತಿಸಿದರು. ವಿಷ್ಣು ಯುವಕ ಮಂಡಲದ ಮಾಜಿ ಅಧ್ಯಕ್ಷ ಅಣ್ಣಿ ಪೂಜಾರಿ ವಂದಿಸಿದರು. ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ವಿಷ್ಣುಯುವಕ ಮಂಡಲದ ಸದಸ್ಯರಾಗಿದ್ದು ನಿಧನರಾಗಿರುವ ಉದಯ ಕುಮಾರ್, ಸುರೇಶ್ ಮಡಿವಾಳ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು.
ಸಂಜೆ ಸಭಾ ಕಾರ್ಯಕ್ರಮದ ಆರಂಭದಲ್ಲಿ ಶಾಸಕ ಸಂಜೀವ ಮಠಂದೂರು ಆಗಮಿಸಿ ಪ್ರಸಾದ ಸ್ವೀಕರಿಸಿ ತೆರಳಿದರು.

25 ಜನರನ್ನು ಕೊಟ್ಟರೆ ಪುತ್ತೂರು ವಿಧಾನಸಭಾ ಕ್ಷೇತ್ರ ಬದಲಾವಣೆ:

ನೂರು ಯುವಕರನ್ನು ಕೊಟ್ಟರೆ ದೇಶವನ್ನು ಬದಲಾವಣೆ ಮಾಡುತ್ತೇನೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಬಹುಶಃ ಈ ಭಾಗದ ೨೫ ಜನರನ್ನು ಕೊಟ್ಟರೆ ಪುತ್ತೂರು ವಿಧಾನಸಭಾ ಕ್ಷೇತ್ರವನ್ನು ಬದಲಾವಣೆ ಮಾಡಬಹುದು ಎಂಬುದು ನನ್ನ ಚಿಂತನೆ. ಹಾಗಾಗಿ ನೀವೆಲ್ಲರೂ ಸಹಕಾರ ನೀಡಬೇಕು. ಮುಂದಿನ ದಿನ ಇಂತಹ ಕಾರ್ಯಕ್ರಮದಲ್ಲಿ ನಾವೆಲ್ಲ ಸಾಕ್ಷಿಯಾಗಬೇಕು.
ಅಶೋಕ್ ಕುಮಾರ್ ರೈ ಕೋಡಿಂಬಾಡಿ

 

 

LEAVE A REPLY

Please enter your comment!
Please enter your name here