ಆಲಂಕಾರು: ಜೇಸಿಐ ಭಾರತದ ಪ್ರತಿಷ್ಠಿತ ಘಟಕವಾದ ಜೇಸಿಐ ಆಲಂಕಾರು ಇದರ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಆದರ್ಶ ಯುವ ನಾಯಕ ಪುರಸ್ಕಾರ ಪ್ರದಾನ ಕಾರ್ಯಕ್ರಮ ಜ.12ರಂದು ಆಲಂಕಾರು ಬಾಕಿಲ ’ಹೊಂಬೆಳಕು’ ಅಲ್ಲಿ ನಡೆಯಿತು.
ಅತಿಥಿಯಾಗಿದ್ದ ಆಲಂಕಾರು ಜೇಸಿಐನ ಪೂರ್ವಾಧ್ಯಕ್ಷರು, ಜೇಸಿಐ ವಲಯ 15ರ ತರಬೇತಿ ವಿಭಾಗದ ನಿರ್ದೇಶಕ ಪ್ರದೀಪ್ ಬಾಕಿಲ ಅವರು ಮಾತನಾಡಿ, ಆಲಂಕಾರು ಜೇಸಿಐ ವತಿಯಿಂದ ನೀಡುವ ಆದರ್ಶ ಯುವ ನಾಯಕ ಪುರಸ್ಕಾರಕ್ಕೆ ಪಾತ್ರರಾಗಿರುವ ರಾಧಾಕೃಷ್ಣ ಆನ ಅವರು ಸ್ವಾಮಿ ವಿವೇಕಾನಂದರ ಆದರ್ಶದಲ್ಲಿ ಬೆಳೆದವರು. ಆಕಸ್ಮಿಕ ವಿದ್ಯುತ್ ಅವಘಡದಲ್ಲಿ ತನ್ನ ಒಂದು ಕೈ ಕಳೆದುಕೊಂಡರೂ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಬದುಕು ಕಟ್ಟಿಕೊಂಡು ಮುನ್ನಡೆಯುತ್ತಿದ್ದಾರೆ. ಇವರೊಬ್ಬ ಆದರ್ಶ ಯುವಕ, ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು. ಇನ್ನೋರ್ವ ಅತಿಥಿ ಆಲಂಕಾರು ಜೇಸಿಐನ ಸ್ಥಾಪಕಾಧ್ಯಕ್ಷ ಜನಾರ್ದನ ಬಿ.ಎಲ್.ರವರು ಮಾತನಾಡಿ, ರಾಧಾಕೃಷ್ಣ ಆನ ಅವರು ಯುವಕರಿಗೆ ಪ್ರೇರಕ ಶಕ್ತಿ. ಇವರಂತಹ ಯುವಕರು ಜೇಸಿಐ ಅಂದೋಲನದಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೇಸಿಐ ಆಲಂಕಾರು ಘಟಕದ ಅಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಮಹೇಶ್ ಪಾಟಾಳಿ ವಂದಿಸಿದರು. ಮಹಿಳಾ ಜೇಸಿ ಅಧ್ಯಕ್ಷೆ ಜಯಶ್ರೀ ಅಲೆಪ್ಪಾಡಿ, ಜೂನಿಯರ್ ಜೇಸಿ ಅಧ್ಯಕ್ಷ ವಿಖಿತ್ ಜಿ.ಕೆ., ಆಲಂಕಾರು ಜೇಸಿಐ ಘಟಕದ ಪೂರ್ವಾಧ್ಯಕ್ಷರಾದ ಗುರುಪ್ರಸಾದ್ ರೈ, ಪ್ರವೀಣ ಆಳ್ವ, ಗುರುಕಿರಣ್ ಶೆಟ್ಟಿ, ಹೇಮಲತಾಪ್ರದೀಪ್, ಗಣೇಶ್ ಕಟ್ಟಪುಣಿ, ಸದಸ್ಯರುಗಳಾದ ಗುರುರಾಜ್ ರೈ ಹಾಗೂ ಪ್ರೇಮ್ಕುಮಾರ್ ಉಪಸ್ಥಿತರಿದ್ದರು.
ಯುವ ಪ್ರೇರಕ ಪುರಸ್ಕಾರ:
ಸಮಾರಂಭದಲ್ಲಿ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯ ಉದ್ಯೋಗಿ ರಾಧಾಕೃಷ್ಣ ಆನ ಅವರಿಗೆ ಆದರ್ಶ ಯುವನಾಯಕ ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಧಾಕೃಷ್ಣ ಆನ ಅವರು ಆಕಸ್ಮಿಕ ವಿದ್ಯುತ್ ಅವಘಡದಲ್ಲಿ ೧ ಕೈ ಕಳೆದುಕೊಂಡರೂ ತನ್ನ ದೈಹಿಕ ನ್ಯೂನತೆಯನ್ನು ಮರೆತು ಕೆಲಸ ನಿರ್ವಹಿಸುತ್ತಿದ್ದಾರೆ. ಗೌರವ ಸ್ವೀಕರಿಸಿ ಮಾತನಾಡಿದ ರಾಧಾಕೃಷ್ಣರವರು ಆಲಂಕಾರು ಜೇಸಿಐ ನೀಡಿದ ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು.