ಪುತ್ತೂರು: ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ಇದರ ಶತಮಾನೋತ್ಸವ ಸಮಿತಿಯ ಸಹಯೋಗದಲ್ಲಿ ರಾಜಾಪುರ ಸಾರಸ್ವತ ಸಂಘ ಕಾಸರಗೋಡು ಆಶ್ರಯದಲ್ಲಿ “ಸಾರಸ್ವತ ಸಂಗಮ-ಶತ ಸಂಭ್ರಮ” ಕಾರ್ಯಕ್ರಮ ಶೇಣಿ ಶ್ರೀಶಾರದಾಂಬ ಶಾಲಾ ವಠಾರದಲ್ಲಿ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿದ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಪುಣಚ ಮಾತನಾಡಿ, ಶತಮಾನದ ಸವಿನೆನಪಿಗಾಗಿ ನಡೆಯುವ ಶತಸಂಭ್ರಮ ಕಾರ್ಯಕ್ರಮ ಯಶಸ್ವಿಗೊಳಿಸಲು ನಾವೆಲ್ಲ ಜೊತೆಯಾಗಿ ಹೆಜ್ಜೆ ಇಡೋಣ ಎಂದರು.
ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷ ಜಯಂತ ನಾಯಕ್ ಕುಂಡೇರಿ ಅಧ್ಯಕ್ಷತೆ ವಹಿಸಿದ್ದರು. ಗೀತಾ ವಾಗ್ಲೆ ಬಂಟಕಲ್ಲು ದಿಕ್ಸೂಚಿ ಮಾತುಗಳನ್ನಾಡಿದರು. ಭಾಲಾವಲೀಕರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ಇದರ ಅಧ್ಯಕ್ಷ ಆಜೇರು ಬಾಲಕೃಷ್ಣ ನಾಯಕ್, ಪೈವಳಿಕೆಯ ಅಧ್ಯಕ್ಷ ಮನೋಹರ ನಾಯಕ್ ಕಂಪದಮೂಲೆ, ಮೊಗೇರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮಚಂದ್ರ ನಾಯಕ್ ಆಳ್ಚಾರ್, ಶಾರದಾಂಬ ವಿದ್ಯಾಸಂಸ್ಥೆಗಳ ಅಧ್ಯಕ್ಷೆ ಶಾರದಾ ವೈ, ಸ್ವಾಗತ ಸಮಿತಿ ಅಧ್ಯಕ್ಷ ಮುಕುಂದ ನಾಯಕ್ ಶೇಣಿ ತೋಟದಮನೆ, ಆರ್.ಎಸ್.ಬಿ.ಯುವ ಸಂಘದ ಗೌರವಾಧ್ಯಕ್ಷ ರಘರಾಮ ಬೋರ್ಕರ್ ಶೇಣಿ, ಮುಗು ಶ್ರೀಸುಬ್ರಾಯ ಕ್ಷೇತ್ರ ಅಧ್ಯಕ್ಷ ರವೀಂದ್ರನಾಥ ನಾಯಕ್ ಶೇಣಿ, ನಾರಾಯಣ ನಾಯಕ್ ಗುರುವಾರೆ, ಶ್ರೀಧರ ನಾಯಕ್ ಕುಕ್ಕಿಲ, ಕಮಲಾಕ್ಷ ನಾಯಕ್ ಕೇರಿಮೂಲೆ, ಪುತ್ತೂರು ಸಂಘದ ಉಪಾಧ್ಯಕ್ಷ ಹರೀಶ್ ಬೋರ್ಕರ್ ಕತ್ತಲಕಾನ, ಕೋಶಾಧಿಕಾರಿ ರಮೇಶ್ ಪ್ರಭು ಸಂಪ್ಯ, ಶತಮಾನೋತ್ಸವದ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ ಎಮ್ ಪುಂಡಿಕಾಯಿ, ಜತೆ ಕಾರ್ಯದರ್ಶಿ ಮಲ್ಲಿಕಾ ಕುಕ್ಕಾಡಿ, ನಿರ್ದೇಶಕರಾದ ಶ್ರೀ ವಿಷ್ಣು ಪ್ರಭು, ದಯಾನಂದ ನಾಯಕ್ ಕುಂಟಿಕಾನ, ನಾರಾಯಣ್ ನಾಯಕ್, ರಂಜಿತಾ ಪ್ರಭು, ದೇವಕಿ ಹರೀಶ್ ನಾಯಕ್ ಸಂಟ್ಯಾರು, ಸುಲೋಚನಾ ವಾಗ್ಲೆ, ಶ್ರೀ ಸರಸ್ವತಿ ಮಹಿಳಾ ಮಂಡಳಿಯ ಕಾರ್ಯದರ್ಶಿ ರೇಖಾ ಪ್ರಭು ಸಂಪ್ಯ, ವೇದಾವತಿ, ಹೇಮಾವತಿ ಹರೀಶ್ ಬೋರ್ಕರ್ ಕತ್ತಲಕಾನ ಮೊದಲಾದವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಹಿರಿಯ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಕರಿಂಬಿಲ ಲಕ್ಷ್ಮಣ ಪ್ರಭು ನೇತೃತ್ವದಲ್ಲಿ ನುರಿತ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಲೆ ಜರುಗಿತು.