ಪುತ್ತೂರು: ಒಳಮೊಗ್ರು ಗ್ರಾಮದ ಕುಕ್ಕುಮುಗೇರು ಶ್ರೀ ಉಳ್ಳಾಕುಲು ಪರಿವಾರ ದೈವಗಳ ನೇಮೋತ್ಸವವು ಜ.29 ರಿಂದ ಬೊಳ್ಳಾಡಿ ರಾಜಮಾಡದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಮೊಕ್ತೇಸರರುಗಳಾದ ಚಿಕ್ಕಪ್ಪ ನಾಯ್ಕ್ ಅರಿಯಡ್ಕ, ಎ.ಜಿ ವಿಜಯ ಕುಮಾರ್ ರೈ ಮುಗೇರು ಅಲ್ಲದೆ ಪ್ರಮುಖರಾದ ದುರ್ಗಾಪ್ರಸಾದ್ ರೈ ಕುಂಬ್ರ, ಸುಧೀಶ್ ಶೆಟ್ಟಿ ಕೈಕಾರ, ಸೀತಾರಾಮ ರೈ ಚೆಲ್ಯಡ್ಕ, ಶ್ರೀನಿವಾಸ ರೈ, ರಕ್ಷಿತ್ ರೈ ಮುಗೇರು, ಚಂದ್ರಶೇಖರ ಗೌಡ, ಸೀತಾರಾಮ ರೈ ಮುಡಾಲ, ಮೋಹನ್ ಗೌಡ ಬೊಳ್ಳಾಡಿ, ಶೀನಪ್ಪ ನಾಯ್ಕ ಬೊಳ್ಳಾಡಿ, ಜಗನ್ನಾಥ ಪೂಜಾರಿ, ತಾರಾನಾಥ ಶೆಟ್ಟಿ ಮುಡಾಲ, ರಾಧಾಕೃಷ್ಣ ರೈ ತುಂಡುಬೈಲ್,ರಾಮಕೃಷ್ಣ ನಾಯ್ಕ್, ಸೀತಾರಾಮ ಶೆಟ್ಟಿ ಕಲ್ಲಡ್ಕ, ಚಂದ್ರಶೇಖರ ಕಲ್ಲಡ್ಕ, ಅನಿತ್ ಪೂಜಾರಿ ಬೊಳ್ಳಾಡಿ, ವಿಶ್ವನಾಥ ಗೌಡ ಬೊಳ್ಳಾಡಿ, ಉಮೇಶ್ ಪೂಜಾರಿ, ತಿಮ್ಮ ಮುಗೇರ, ರಾಜಶೇಖರ ಶೆಟ್ಟಿ ಮುಡಾಲ ಮತ್ತಿತರರು ಉಪಸ್ಥಿತರಿದ್ದರು.