ಪುತ್ತೂರು:ಮಕ್ಕಳಲ್ಲಿ ಹುದುಗಿರುವ ವೈಜ್ಞಾನಿಕ ಮನೋವೃತ್ತಿಯನ್ನು ಹೊರ ತರುವ ಉದ್ಧೇಶದಿಂದ ಡಿಪಾರ್ಟ್ಮೆಂಟ್ ಆಫ್ ಸೈನ್ಸ್ ಮತ್ತು ನ್ಯಾಷನಲ್ ಇನ್ನೋವೇಷನ್ ಫೌಂಡೇಷನ್ ಗವರ್ನ್ಮೆಂಟ್ ಆಫ್ ಇಂಡಿಯಾದ ವತಿಯಿಂದ ನಡೆಯುವ inspire ಅವಾರ್ಡ್ ಮಾನಕ್-2022-23ನೇ ಸಾಲಿಗೆ ಕುಡಿಪಾಡಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ತೃಪ್ತಿ(ರಾಧಾಕೃಷ್ಣ ಮತ್ತು ಶೋಭಾ ದಂಪತಿ ಪುತ್ರಿ)ರವರ ‘ಆಟೋಮ್ಯಾಟಿಕ್ ಎನರ್ಜಿ ಸೇವಿಂಗ್ ಯೂಸಿಂಗ್ ಟೆಂಪರೇಚರ್ ಆಂಡ್ LDR’, 8ನೇ ತರಗತಿ ವಿದ್ಯಾರ್ಥಿನಿ ಲಾವಣ್ಯ (ದೇವಪ್ಪ ಗೌಡ ಮತ್ತು ಮೋಹಿನಿ ದಂಪತಿ ಪುತ್ರಿ)ರವರ ‘ಬೇಬಿ ಫಾಲ್ ಅಲರ್ಟ್ ಆಂಡ್ ಲೈಫ್ ಸೇವ್ ಯೂಸಿಂಗ್ ಸೈರನ್’, ಆರನೇ ತರಗತಿಯ ಶಮಿತಾ ಜಿ(ದಿನೇಶ್ ಜಿ ಹಾಗೂ ಗೀತಾ ದಂಪತಿ ಪುತ್ರಿ)ರವರು ‘ಸ್ಮಾರ್ಟ್ ರಿಯಲ್ ಟೈಮ್ ಮ್ಯಾನ್ ಹೋಲ್ ಮಾನಿಟರಿಂಗ್ ಸಿಸ್ಟಂ’, ಆರನೇ ತರಗತಿಯ ಮಹಮದ್ ಶಹಬಾಜ್(ಪಿ.ಅಬ್ದುಲ್ ರಹಿಮಾನ್ ಹಾಗೂ ಕಮರುನ್ನೀಸ ದಂಪತಿ ಪುತ್ರ)ರವರು ‘ಇರಿಗೇಶನ್ ಮೋಟಾರ್ ಕಂಟ್ರೋಲ್ ಸಿಸ್ಟಂ ಯೂಸಿಂಗ್ ಮೊಬೈಲ್’ ಮಾದರಿ ಗಳು ಆಯ್ಕೆಯಾಗುವುದರೊಂದಿಗೆ ಈ ವಿದ್ಯಾರ್ಥಿಗಳು ತಲಾ ರೂ.ಹತ್ತು ಸಾವಿರ ಧನಸಹಾಯ ಪಡೆದಿರುತ್ತಾರೆ.
ಈ ವಿಜ್ಞಾನ ಯೋಜನೆಗಳಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್ ಹಾಗೂ ವಿಜ್ಞಾನ ಶಿಕ್ಷಕಿ ಶ್ರೀಮತಿ ಆರತಿ ರಾವ್ ರವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿಗಳು ವಿಜ್ಞಾನವನ್ನು ಅಧ್ಯಯನ ಮಾಡಿ, ಅವರಲ್ಲಿ ಸಂಶೋಧನಾ ವೃತ್ತಿಯನ್ನು ಮುಂದುವರೆಸುವ ಹಾಗೂ ಸೃಜನಶೀಲ ಚಿಂತನೆಯನ್ನು ಉತ್ತೇಜಿಸಲು ಬೆಳೆಸುವ ಪ್ರಯತ್ನ ವಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಪ್ರಭಾ ಎಸ್ ತಿಳಿಸಿದ್ದಾರೆ.