ಜ.19-ದೇವರ ರಥೋತ್ಸವ, ಪಲ್ಲಕ್ಕಿ ಉತ್ಸವ * ಜ.20 ದರ್ಶನ ಬಲಿ ಉತ್ಸವ
ಕಾಣಿಯೂರು: ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಮತ್ತು ಅಮರಕಾಸ್ಪಾಡಿ ಶ್ರೀ ಜೋಡುದೈವಗಳ ಕ್ಷೇತ್ರದ ನೇಮೋತ್ಸವವು ಜ.17 ರಿಂದ ಜ.25 ರವರೆಗೆ ಜರಗಲಿದೆ. ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಹಿರಿತನದಲ್ಲಿ ವರ್ಷಾವಧಿ ಜಾತ್ರೋತ್ಸವ ನಡೆಯಲಿದ್ದು ಜ.17ರಂದು ಬೆಳಿಗ್ಗೆ ದೇವಸ್ಥಾನಕ್ಕೆ ದೈವಗಳ ಭಂಡಾರ ಆಗಮನ, ಧ್ವಜಾರೋಹಣ, ಮಹಾಪೂಜೆ ನಡೆಯಲಿದೆ. ರಾತ್ರಿ ನಾಲ್ಕಂಭ, ಮುದುವ, ಅಬಿಕಾರ, ಬಾರೆಂಗಳಗುತ್ತು, ಜತ್ತೋಡಿ, ಕಲಾಯಿವರೆಗೆ ಕಟ್ಟೆಪೂಜೆ, ದೇವರ ಪೇಟೆ ಸವಾರಿ ಜರಗಲಿದೆ.
ಜ.18 ರಂದು ಬೆಳಿಗ್ಗೆ ನಿತ್ಯಬಲಿ, ಮಹಾಪೂಜೆ, ರಾತ್ರಿ ವಾಲಸರಿ ಕಟ್ಟೆಯಿಂದ ಅಯೋಧ್ಯನಗರ, ದೇವರಗುಡ್ಡೆ, ಎರ್ಕ, ಎಣ್ಮೂರು ಕಟ್ಟೆಯವರೆಗೆ ಪೇಟೆ ಸವಾರಿ ನಡೆಯಲಿದೆ.
ಜ.19 ರಂದು ಬೆಳಿಗ್ಗೆ ನಿತ್ಯಬಲಿ, ಮಹಾಪೂಜೆ, ರಾತ್ರಿ ಮಹಾರಂಗಪೂಜೆ, ಉತ್ಸವ ಬಲಿ, ಶ್ರೀ ದೇವರ ಪಲ್ಲಕ್ಕಿ ಉತ್ಸವ, ದೇವರ ರಥೋತ್ಸವ ನಡೆಯಲಿದೆ.
ಜ.20 ರಂದು ಬೆಳಿಗ್ಗೆ ದರ್ಶನ ಬಲಿ ಉತ್ಸವ, ದೈವಗಳ ಭೇಟಿ, ಬಟ್ಟಲು ಕಾಣಿಕೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಕಲಾಯಿ ರಥ ಕಟ್ಟೆಪೂಜೆ, ಚಾಮುಂಡಿ ನೇಮ, ಉತ್ಸವ ಬಲಿ, ಅಷ್ಟವಧಾನ ಸೇವೆ, ಶಯನ ಮತ್ತು ಸುಡುಮದ್ದು ಪ್ರದರ್ಶನ ನಡೆಯಲಿದೆ.
ಜ.21 ರಂದು ಬೆಳಿಗ್ಗೆ ಕವಟೋದ್ಘಾಟನೆ, ಸಾಯಂಕಾಲ ಕುಮಾರಧಾರ ನದಿಗೆ ಅವಭೃತ ಸ್ನಾನ ಹಿಂದಿರುಗಿ ಬಂದು ಬಟ್ಟಲುಕಾಣಿಕೆ ಮತ್ತು ಧ್ವಜಾವರೋಹಣ, ಧಾರ್ಮಿಕ ಸಭೆ, ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಇವರ ಸಂಯೋಜನೆಯಲ್ಲಿ ಯಕ್ಷಗಾನ ಜರಗಲಿದೆ. ಜ.22 ರಂದು ಶ್ರೀ ದೇವರ ಸಂಪ್ರೋಕ್ಷಣೆ ನಡೆಯಲಿದೆ.
ಜ.22-ನೇಮೋತ್ಸವಕ್ಕೆ ಗೊನೆ ಮುಹೂರ್ತ:
ಜ.22ರಂದು ಬೆಳಿಗ್ಗೆ ಅಮರಕಾಸ್ಪಾಡಿ ಇರ್ವೆರ್ ಉಳ್ಳಾಕುಲು ನೇಮೋತ್ಸವಕ್ಕೆ ಗೊನೆ ಕಡಿಯುವುದು, ಇರ್ವೆರ್ ಉಳ್ಳಾಕುಲ ಭಂಡಾರ ತೆಗೆದು ದೈವಗಳ ವಾಲಸರಿ, ಜ.23 ರಂದು ರಾತ್ರಿ ಕೀಲೆ ಮಾಡದಲ್ಲಿ ಪೂಮಾಣಿ ದೈವ ಮತ್ತು ಪೂವಲಂಕಮ್ಮ ದೆಯ್ಯೆರೆ ನೇಮೋತ್ಸವ,
ಜ.24 ರಂದು ಕಳಂಗಾಜೆ ಮಾಡದಲ್ಲಿ ಕಿನ್ನಿಮಾಣಿ ದೈವದ ನೇಮೋತ್ಸವ, ಚಂದುನಾಯರ್, ಮಾರ್ಲ್ ಮಾಣಿ, ಹಳ್ಳತ್ತಾಯ ಮತ್ತು ಇತರ ಉಪದೈವಗಳ ನೇಮೋತ್ಸವ,
ಜ.25ರಂದು ಅಮ್ಮನವರ ಪೂಜೆ ಮತ್ತು ಶಿರಾಡಿ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ಜರಗಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೊರಗಪ್ಪ ಗೌಡ ಕುಕ್ಕುನಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ, ಜೋಡುದೈವಗಳ ಕ್ಷೇತ್ರದ ಆಡಳಿತದಾರ ಕುಸುಮಾಧರ ರೈ ಕಾಸ್ಪಾಡಿಗುತ್ತು, ಅರ್ಚಕ ವೆಂಕಟಕೃಷ್ಣ ಭಟ್, ಆಡಳಿತ ಪಂಗಡ ಅಧ್ಯಕ್ಷ ಪದ್ಮನಾಭ ಗೌಡ ಪೊನ್ನೆತ್ತಡಿ, ಕಾರ್ಯದರ್ಶಿ ಶಿವಪ್ರಸಾದ್ ಕೀಲೆ ತಿಳಿಸಿದ್ದಾರೆ.
ಇಂದು ಕ್ಷೇತ್ರದಲ್ಲಿ ವಿವಿಧ ಕಾಮಗಾರಿ ಲೋಕಾರ್ಪಣೆ:
ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ರಾಜಾಂಗಣ ಮತ್ತು ಹೊರಾಂಗಣ ಸುತ್ತು ಮೇಲ್ಛಾವಣಿ ಮತ್ತು ಇಂಟರ್ಲಾಕ್ ಲೋಕಾರ್ಪಣೆಯು ಜ.17ರಂದು ನಡೆಯಲಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೊರಗಪ್ಪ ಗೌಡ ಕುಕ್ಕುನಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಅದಾನಿ ಸಮೂಹದ ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್ ಆಳ್ವ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸು, ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ, ಕಾಣಿಯೂರು ಬಿ.ಕೆ ಕಾಂಪ್ಲೆಕ್ಸ್ ಮಾಲಕ ಪ್ರದೀಪ್ ಬೊಬ್ಬೆಕೇರಿಯವರು ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.