ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ರಾಜಾಂಗಣ ಮತ್ತು ಹೊರಾಂಗಣ ಸುತ್ತು ಮೇಲ್ಛಾವಣಿ, ಇಂಟರ್‌ಲಾಕ್ ಉದ್ಘಾಟನೆ

0

ಕಾಣಿಯೂರು: ಕ್ಷೇತ್ರದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ಜೊತೆ ಜೊತೆಗೆ ಊರಿನ ಭಕ್ತರಿಗೆ ಭಗವದ್ಗೀತೆ ಪುಸ್ತಕ ಮತ್ತು ಕ್ಷೇತ್ರದ ಹಿನ್ನಲೆಯಿರುವ ಪುಸ್ತಕವನ್ನು ಕೊಡುವ ಕೆಲಸ ಎಲ್ಲಾ ಕಡೆಗಳಲ್ಲಿ ಆಗಬೇಕಿದೆ. ಹಿಂದೂ ಧರ್ಮವನ್ನು ಕಾಪಾಡಬೇಕು, ಹಾಗೆಯೇ ಮಕ್ಕಳಿಗೆ ದೇವಸ್ಥಾನಗಳಲ್ಲಿ ಸಂಸ್ಕೃತ, ಧಾರ್ಮಿಕ ಶಿಕ್ಷಣವನ್ನು ನೀಡುವ ಕೆಲಸ ಆಗಬೇಕು. ಅದಾನಿ ಸಮೂಹ ಸಂಸ್ಥೆಯಿಂದ ಯಾವತ್ತೋ ಕ್ಷೇತ್ರಕ್ಕೆ ಸಹಾಯ ಮಾಡುವುದಾಗಿ ಅದಾನಿ ಸಮೂಹದ ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು.

ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ರಾಜಾಂಗಣ ಮತ್ತು ಹೊರಾಂಗಣ ಸುತ್ತು ಮೇಲ್ಛಾವಣಿ ಮತ್ತು ಇಂಟರ್‌ಲಾಕ್ ಉದ್ಘಾಟನೆಯನ್ನು ಜ.17ರಂದು ನೆರವೇರಿಸಿ ಮಾತನಾಡಿದರು.

ನೀರಿನ ಟ್ಯಾಂಕ್‌ನ ಉದ್ಘಾಟನೆಯನ್ನು ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸು ನೆರವೇರಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೊರಗಪ್ಪ ಗೌಡ ಕುಕ್ಕುನಡ್ಕ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ, ಕಾಣಿಯೂರು ಬಿ.ಕೆ ಕಾಂಪ್ಲೆಕ್ಸ್ ಮಾಲಕ ಪ್ರದೀಪ್ ಬೊಬ್ಬೆಕೇರಿ, ಚಾರ್ವಾಕ ಜೋಡು ದೈವಗಳ ಕ್ಷೇತ್ರದ ಆಡಳಿತದಾರರಾದ ಕುಸುಮಾಧರ ರೈ ಕಾಸ್ಪಾಡಿಗುತ್ತು, ಆಡಳಿತ ಪಂಗಡ ಅಧ್ಯಕ್ಷ ಪದ್ಮನಾಭ ಪೊನ್ನೆತ್ತಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಪ್ರಿತಾ ಕರಂದ್ಲಾಜೆ ಮತ್ತು ಶಕುಂತಳಾ ಕಾಸ್ಪಾಡಿಗುತ್ತು ಪ್ರಾರ್ಥಿಸಿದರು. ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ ಸ್ವಾಗತಿಸಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಸಂತ ಪೂಜಾರಿ ದಲಾರಿ ವಂದಿಸಿದರು. ಶಿವಪ್ರಸಾದ್ ಬಾರೆಂಗಳ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ:
ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅದಾನಿ ಸಮೂಹದ ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್ ಆಳ್ವ, ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸು, ಗ್ರಾ.ಪಂ.ಉಪಾಧ್ಯಕ್ಷ, ಗಣೇಶ್ ಉದನಡ್ಕ, ಕಾಣಿಯೂರು ಬಿ.ಕೆ ಕಾಂಪ್ಲೆಕ್ಸ್ ಮಾಲಕರಾದ ಪ್ರದೀಪ್ ಬೊಬ್ಬೆಕೇರಿ ಹಾಗೂ ರಾಜಾಂಗಣ ಮತ್ತು ಹೊರಾಂಗಣ ಸುತ್ತು ಮೇಲ್ಛಾವಣಿ ಕೆಲಸ ನಿರ್ವಹಿಸಿದ ನವೀನ್ ಪಂಜ, ಇಂಟರ್‌ಲಾಕ್ ಕಾಮಗಾರಿ ನಡೆಸಿದ ಯೋಗೀಶ್ ಆಚಾರ್ಯ ಅವರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here