ಪುತ್ತೂರು: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯದಾದ್ಯಂತ ನಡೆಯಲಿರುವ ಪ್ರಜಾಧ್ವನಿ ಯಾತ್ರೆಯು ಜ.22ರಂದು ಮಂಗಳೂರಿಗೆ ಆಗಮಿಸಿ ಇದರ ಬೃಹತ್ ಸಮಾವೇಶ ಮಂಗಳೂರು ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದ್ದು ಇದರ ಪ್ರಯುಕ್ತ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಸಮಾಲೋಚನಾ ಸಭೆ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ ಕಾರ್ಯಕ್ರಮದ ಮಾಹಿತಿ ನೀಡಿ ಪುತ್ತೂರಿನಿಂದ ಅತೀ ಹೆಚ್ಚು ಸಂಖ್ಯೆಯಲ್ಲಿ ಬಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕರೆ ನೀಡಿದರು. ಮಂಗಳೂರು ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಎಂ.ಬಿ. ವಿಶ್ವನಾಥ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭಾ ಸದಸ್ಯ ರಿಯಾಝ್ ಪರ್ಲಡ್ಕ ಸ್ವಾಗತಿಸಿದರು. ಸಾಮಾಜಿಕ ಜಾಲತಾಣ ಬ್ಲಾಕ್ ಅದ್ಯಕ್ಷ ಸಿದ್ದೀಕ್ ಸುಲ್ತಾನ್ ಕಾರ್ಯಕ್ರಮ ನಿರೂಪಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ವಂದಿಸಿದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅದ್ಯಕ್ಷ ಮಹಮ್ಮದ್ ಬಡಗನ್ನೂರು, ಕಾವು ಹೇಮನಾಥ ಶೆಟ್ಟಿ, ಪಕ್ಷದ ನಾಯಕರಾದ ಎಂ.ಎಸ್. ಮಹಮ್ಮದ್, ಸತೀಶ್ ಕೆಡೆಂಜಿ, ಧನಂಜಯ ಅಡ್ಪಂಗಾಯ, ಜಂದ್ರಹಾಸ ಶೆಟ್ಟಿ, ಮಲ್ಲಿಕಾ ಪಕಳ, ಮಮತಾ ಗಟ್ಟಿ, ಕೆ.ಕೆ. ಶಾಹುಲ್ ಹಮೀದ್, ಶಕೂರ್ ಹಾಜಿ, ಮಹಾಲಿಂಗ ನಾಯ್ಕ್, ಪ್ರಸಾದ್ ಕೌಶಲ್ ಶೆಟ್ಟಿ, ಮೌರಿಸ್ ಮಸ್ಕರೇನಸ್, ಅನ್ವರ್ ಕಾಸಿಂ, ಶ್ರೀಪ್ರಸಾದ್ ಪಾಣಾಜೆ, ಕೇಶವ್ ಪಡೀಲ್, ಶರೂನ್ ಸಿಕ್ವೇರಾ, ಶಾರದಾ ಅರಸ್, ಅನಿತಾ ಹೇಮನಾಥ ಶೆಟ್ಟಿ, ವಿಶಾಲಾಕ್ಷಿ ಬನ್ನೂರು, ಯಾಕೂಬ್ ಮುಲಾರ್, ಬಾಸ್ಕರ ಗೌಡ ಕೋಡಿಂಬಾಳ, ಸನತ್ ರೈ, ಸಿರಿಲ್ ರೋಡ್ರೀಗಸ್, ರಾಮಚಂದ್ರ ಸೊರಕೆ, ಸುಪ್ರೀತ್ ಕಣ್ಣಾರಾಯ, ಎಡ್ವರ್ಡ್ ಡಿ.ಸೋಜ, ಬಾಬು ರೈ ಕೋಟೆ, ಸೀತಾ ಉದಯಶಂಕರ್, ಅಲಿಕುಂಞಿ ಕೊರಿಂಗಿಲ, ಶರೀಫ್ ಕೊಯಿಲ, ಜಯಂತ ಕೆಂಗುಡೇಲು, ಬಾಲಕೃಷ್ಣ ಗೌಡ, ಮೂಸಾನ್ ಕರ್ನೂರು, ಪಿ.ಕೆ. ಮಹಮ್ಮದ್, ಗಫೂರ್ ಸಾಹೇಬ್, ಅಶೋಕ್ ಕುಮಾರ್, ಐತ್ತಪ್ಪ ಪೇರಳ್ತಡ್ಕ, ರಶೀದ್ ಮುರ, ಕೃಷ್ಣಪ್ರಸಾದ್, ಅಬೂಬಕರ್ ಕೊರಿಂಗಿಲ, ಅಝೀಝ್ ಮುಕ್ವೆ ಸೇರಿದಂತೆ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.