ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆದ ‘ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ನಾಯಕರ ಪಾತ್ರ’ ಎಂಬ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಅಖಿಲ ಭಾರತ ವನವಾಸೀ ಕಲ್ಯಾಣಾಶ್ರಮ, ದಕ್ಷಿಣ ಮಧ್ಯಕ್ಷೇತ್ರ (ಕರ್ನಾಟಕ, ತೆಲಂಗಾಣ, ಆಂಧ್ರ) ಇದರ ಸಂಘಟನಾ ಕಾರ್ಯದರ್ಶಿ ಶ್ರೀಪಾದ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದ್ದು, “ಇತಿಹಾಸದಲ್ಲಿ ಮರೆಯಾದ ವೀರರನ್ನು ಗುರುತಿಸಿ ಅರಿಯುವ ಅಗತ್ಯವಿದೆ. ಆಗ ಮಾತ್ರವೇ ಭಾರತವನ್ನು ಮತ್ತೆ ವಿಶ್ವಗುರುವನ್ನಾಗಿಸಲು ಸಾಧ್ಯ ಎಂದರು. ಜೊತೆಗೆ ಈಗ ಭಾರತ ಮಾತೆಯು ಜೀವ ನೀಡುವವರನ್ನು ಬಯಸುವುದಿಲ್ಲ. ಬದಲಾಗಿ ಜೀವನವನ್ನು ಬಯಸುತ್ತಿದ್ದಾಳೆ, ನಾವು ಅಂತಹ ಭಾರತ ಮಾತೆಯ ಸುಪುತ್ರರಾಗಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಅಕ್ಷತಾ ಎ.ಪಿ. ಹಾಗೂ ಸಹಾಯಕ ಪ್ರಾಧ್ಯಾಪಕಿ ಶ್ರೀರಕ್ಷಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮೈತ್ರಿ ಎಂ. ಪ್ರಾರ್ಥಿಸಿ, ಜ್ಯೋತಿಕಾಲಕ್ಷ್ಮೀ ಎಂ. ಸ್ವಾಗತಿಸಿದರು. ಕಾರ್ಯಕ್ರಮವನ್ನು ಗಣ್ಯ ಬಿ. ನಿರೂಪಿಸಿ, ಸೀಮಾ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.