ಪುತ್ತೂರು: ದರ್ಬೆ ಪಾಂಗಳಾಯಿ ನಿವಾಸಿ, ನಿವೃತ್ತ ಉಪನ್ಯಾಸಕರು ಬಿಲ್ಲವ ಸಂಘದಲ್ಲಿ ಸಕ್ರೀಯರಾಗಿದ್ದ ಜನಾರ್ದನ ಪಾಂಗಳಾಯಿ(84 ವ.)ಯವರು ಅಸೌಖ್ಯದಿಂದ ಜ.18 ರಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಕನ್ಯಾನ ಪ್ರೌಢ ಶಾಲೆ, ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲೆ, ಸುಳ್ಯ ಪದವಿ ಪೂರ್ವ ಕಾಲೇಜು, ಸುಳ್ಯ ಎಲಿಮಲೆ ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ, ವಾಮದಪದವು ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕುಂಬ್ರ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.
ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದ ಇವರು ಬಿಲ್ಲವ ಸಂಘದ ಆರಂಬಿಕ ಕಾಲದಿಂದಲೇ ಸಕ್ರೀಯವಾಗಿ ಸೇವೆ ಸಲ್ಲಿಸಿದ್ದ ಜನಾರ್ದನರವರು ಬಿಲ್ಲವ ಸಂಘದ ವಿಶೇಷ ಆಹ್ವಾನಿತ ಸದಸ್ಯರಾಗಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಪತ್ನಿ ತಾಲೂಕು ಕಚೇರಿ ಖಜಾನೆ ಶಾಖೆಯ ನಿವೃತ್ತ ಮುಖ್ಯ ಲೆಕ್ಕಿಗರಾದ ಸುಮತಿ, ಅಮೇರಿಕಾದಲ್ಲಿ ಉದ್ಯೋಗದಲ್ಲಿರುವ ಪುತ್ರ ರೋಶನ್, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಪುತ್ರಿ ರೇಖಾ, ಸೊಸೆ ಮಮತಾ, ಅಳಿಯ ಸತೀಶ್ ಸುವರ್ಣ ಮೊಮ್ಮಕ್ಕಳಾದ ಧನ್ವಿ. ಕೃತಿಕ್, ವರುಣ್ ರವರನ್ನು ಅಗಲಿದ್ದಾರೆ.
ಜ.20 ರಂದು ಅಂತ್ಯಕ್ರಿಯೆ:
ಮೃತರ ಅಂತಿ ಕ್ರಿಯೆಗಳು ಜ.20ರಂದು ಬೆಳಿಗ್ಗೆ 10 ಗಂಟೆಗೆ ಪಾಂಗಳಾಯಿ ಸ್ವಗೃಹದಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.