ನಿಡ್ಪಳ್ಳಿ; ನಿಡ್ಪಳ್ಳಿ ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಗಳ ವರ್ಷಾವಧಿ ಜಾತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಜ.20 ರಂದು ದೇಲಂಪಾಡಿ ಶ್ರೀ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಪ್ರಾತ;ಕಾಲ ನಡೆಯಿತು.

ಜ.19 ರಂದು ಗುತ್ತು ಚಾವಡಿಯಲ್ಲಿ ಗಣಹೋಮ, ದೈವಗಳ ಶುದ್ಧಿಕಲಶ ನಡೆದು ಮಧ್ಯಾಹ್ನ ತಂಬಿಲ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಗುತ್ತು ಚಾವಡಿಯಿಂದ ಹುಲಿಭೂತ, ಮಲರಾಯ ದೈವಗಳ ಭಂಡಾರ ಉಳ್ಳಾಕುಲು ಮಾಡಕ್ಕೆ ತೆರಳಿ ಧ್ವಜಾರೋಹಣ ನೆರವೇರಿತು. ರಾತ್ರಿ ಅನ್ನಸಂತರ್ಪಣೆ ನಡೆಯಿತು.
ಅನುವಂಶಿಕ ಆಡಳಿತ ಮೊಕ್ತೇಸರ ಪ್ರವೀಣ ಎನ್.ಅರಿಗ ನಿಡ್ಪಳ್ಳಿ ಗುತ್ತು, ಪ್ರಮೋದ್ ಆರಿಗ ನಿಡ್ಪಳ್ಳಿ ಗುತ್ತು ಹಾಗೂ ಕುಟುಂಬಸ್ಥರು, ಬಾರಿಕೆ ಮನೆಯವರು ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.ಜ.20 ರಿಂದ 25 ರವರೆಗೆ ಜಾತ್ರೋತ್ಸವ ನಡೆಯಲಿದೆ.