ಪುತ್ತೂರು:ಪುರುಷರ ಸಿದ್ಧ ಉಡುಪುಗಳ ಮಳಿಗೆ ಫ್ಯಾಬ್ಲೋ ಜ.23ರಂದು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಕಮರ್ಷಿಯಲ್ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡಿತು.
ನೂತನ ಮಳಿಗೆಯನ್ನು ಉದ್ಘಾಟಿಸಿದ ಬಲ್ನಾಡ್ ಆರ್ಜೆಎಂ ಇದರ ಗೌರವಾಧ್ಯಕ್ಷ ಅಸ್ಸಯ್ಯದ್ ತಂಙಲ್ ಮಾತನಾಡಿ, ಪುತ್ತೂರಿನಲ್ಲಿ ಪ್ರಾರಂಭಗೊಂಡಿರುವ ನೂತನ ಮಳಿಗೆಯ ಮೂಲಕ ಉತ್ತಮ ವ್ಯಾಪಾರವಾಗಿ, ಸಂಸ್ಥೆಯು ಅಭಿವೃದ್ಧಿಯತ್ತ ಸಾಗಲಿ ಎಂದು ಹಾರೈಸಿದರು. ನಗರಸಭಾ ಸದಸ್ಯ ರಿಯಾಝ್ ರಾಹಾ ಮಾತನಾಡಿ, ಯೋಗ್ಯ ಬೆಲೆಯಲ್ಲಿ ಗುಣಮಟ್ಟದ ಉಡುಪುಗಳು ಗ್ರಾಹಕರಿಗೆ ದೊರೆಯುವಂತಾಗಲಿ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುವಂತಾಗಲಿ ಎಂದರು.
ಬಲ್ನಾಡು ಆರ್ಜೆಎಂನ ಇಸ್ಮಾಯಿಲ್ ನಾಟೆಕಲ್ ಮಾತನಾಡಿ, ಸಂಸ್ಥೆಯು ಲಾಭದತ್ತ ಸಾಗಲಿ ಎಂದು ಶುಭಹಾರೈಸಿದರು.
ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಉದ್ಯಮಿ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಅಶೋಕ್ ರಾವ್ ಬಪ್ಪಳಿಗೆ, ಉದ್ಯಮಿ ರಹಿಂ ಎಂ.ಜಿ., ಕೂಡುರಸ್ತೆ ಆರ್ಜೆಎಂನ ಖತೀಬ್ ಇಬ್ರಾಹಿಂ ಫೈಝಿ, ಯುವ ಮುಂದಾಳು ಶರೀಫ್ ಬಲ್ನಾಡು, ಸಿದ್ದೀಕ್ ಸುಲ್ತಾನ್, ಮಜೀದ್ ಬಾಳಾಯ, ಪ್ರಕಾಶ್ ಪುರುಷರಕಟ್ಟೆ, ಶರೀಫ್ ಬಲ್ನಾಡು, ಹುಸೈನ್, ಬಾತೀಷ ಬಲ್ನಾಡು, ಇರ್ಷಾದ್, ಉಮ್ಮರ್ ಕಾವು, ರಫೀಕ್, ಆಶೀಕ್, ಹಸೈನಾರ್ ನವಾಝ್, ಮುಸ್ತಾಫ, ಹ್ಯಾರೀಸ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಮಳಿಗೆಯ ಶುಭಾರಂಭದ ಪ್ರಯಕ್ತ ಪುರುಷರ ಎಲ್ಲಾ ರೀತಿಯ ಸಿದ್ದು ಉಡುಪುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.