ಪುತ್ತೂರು: ಕೆದಂಬಾಡಿ ಬಿಜೆಪಿ ಶಕ್ತಿ ಕೇಂದ್ರದ ಸಭೆಯು ಜ. 19ರಂದು ತಿಂಗಳಾಡಿ ದೇವಗಿರಿಯಲ್ಲಿ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಸಹಜ ರೈ ಬಳಜ್ಜರವರ ಉಪಸ್ಥಿತಿಯಲ್ಲಿ ನಡೆಯಿತು. ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನ ಮತ್ತು ಬರುವ ಚುನಾವಣೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಕೆದಂಬಾಡಿ ಗ್ರಾಮದಲ್ಲಿ ಆಗಿರುವ ಅಭಿವೃದ್ಧಿಯ ಬಗ್ಗೆ ಮನೆ ಮನೆಗೆ ತಲುಪಿಸಬೇಕು ಎಂದು ಹೇಳಿದರು.
ಕೆದಂಬಾಡಿ ಶಕ್ತಿ ಕೇಂದ್ರದ ಸಾಂ ಪ್ರಮುಖರಾಗಿ ರೇಖಾ ರಾಘವ ಗೌಡ ಕೆರೆಮಾರುರವರನ್ನು ನೇಮಕ ಮಾಡಲಾಯಿತು ಮತ್ತು ಸಾಮಾಜಿಕ ಜಾಲತಾಣದ ಪ್ರಾಮುಖ್ಯರಾಗಿ ಜನಾರ್ದನ್ ರೈ ಕೆ ಕೊಡಂಗಿರಿ, ಚರಣ್ ರೈ ಕುರಿಕ್ಕಾರ, ರೋಹಿತ್ ಗೌಡ, ಸೂರ್ಯ ಪ್ರಸನ್ ರೈ ಎಂಡೆಸಾಗುರವರನ್ನು ನೇಮಕ ಮಾಡಲಾಯಿತು. ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯಕುಮಾರ್ ರೈ ಕೋರಂಗ, ಗ್ರಾಮ ಪಂಚಾಯತ್ ಅಧ್ಯಕ್ಷ ರತನ್ ರೈ ಕುಂಬ್ರ, ಶಕ್ತಿ ಕೇಂದ್ರದ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ, ಟಿಎಪಿಸಿಎಂಎಸ್ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಪಂಚಾಯತ್ ಉಪಾಧ್ಯಕ್ಷ ಭಾಸ್ಕರ್ ರೈ ಮಿತ್ರಂಪಾಡಿ, ತಾಲೂಕು ರೈತ ಮೋರ್ಚಾದ ಸದಸ್ಯ ಮಹಾಬಲ ರೈ ಕುಕ್ಕುಂಜೋಡು, ದೇವತಗಿರಿ ಭಜನಾ ಮಂದಿರದ ಅಧ್ಯಕ್ಷ ಜಯರಾಮ್ ರೈ ಮಿತ್ರಂಪಾಡಿ, ಗಣೇಶ್ ರೈ ಮಿತ್ರಂಪಾಡಿ, ಪುಷ್ಪ ಎಂ ಬೋಳೋಡಿ, ಕೆದಂಬಾಡಿ 4 ಬೂತಿನ ಅಧ್ಯಕ್ಷರುಗಳಾದ ವೀಣಾ ಆರ್ ರೈ ಬೆದ್ರುಮಾರು, ಸೀತಾರಾಮ ಗೌಡ ಇದ್ಯಪೆ, ಕೊರಗಪ್ಪ ಪೂಜಾರಿ ತಿಂಗಳಾಡಿ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಕುಮಾರ್ ಇದ್ಯಪೆ, ಚಂದ್ರ ಇದ್ಪಾಡಿ, ಶರತ್ ಕುಮಾರ್ ಗುತ್ತು, ಎ ಟಿ ನಾರಾಯಣ್ ತಿಂಗಳಾಡಿ, ಪಂಚಾಯತಿ ಸದಸ್ಯರುಗಳಾದ ಸುಜಾತ ಎಂ, ಜಯಲಕ್ಷ್ಮೀ ಬಳ್ಳಾಲ್, ರೇವತಿ ಬಿ, ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರುಗಳಾದ ಸೂರ್ಯಪ್ರಸನ್ನ ರೈ ಎಂಡೆಸಾಗು, ಬಾಬು, ವೀರಪ್ಪ ನಾಯ್ಕ, ಹರೀಶ್ ರೈ ಮಿತ್ರಂಪಾಡಿ, ಐ ಸಿ ಉದಯ್ ಕುಮಾರ್ ಇದ್ಯಪೆ, ತಾರಾನಾಥ್ ರೈ ಕುರಿಕ್ಕಾರ, ಲೋಹಿತ್ ಗೌಡ ಗುತ್ತು, ಮಂಜುನಾಥ್ ಇದ್ಪಾಡಿ, ಪುಷ್ಪರಾಜ್ ಚಾವಡಿ, ಕಿರಣ್ ಕುಮಾರ್ ಡಿ ಕೊರಗಪ್ಪ, ಮೋಹನ ಅಂಬೇಡ್ಕರ್ ನಗರ ಮತ್ತಿತರರು ಉಪಸ್ಥಿತರಿದ್ದರು. ಶರತ ಕುಮಾರ್ ಗುತ್ತು ಸ್ವಾಗತಿಸಿ, ಕೃಷ್ಣಕುಮಾರ್ ಇದ್ಯಪೆ ವಂದಿಸಿದರು.