ಜ.25: ಕಲ್ಲಮ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ 35ನೇ ವಾರ್ಷಿಕೋತ್ಸವ, ರಥೋತ್ಸವ

ಪುತ್ತೂರು: ಸರ್ವೆ ಗ್ರಾಮದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಕಲ್ಲಮ ಇಲ್ಲಿ 35ನೇ ವಾರ್ಷಿಕೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮ ಜ.25ರಂದು ನಡೆಯಲಿದೆ.

ಉದಯದಿಂದ ಉದಯಾಸ್ತದವರೆಗೆ ವಿವಿಧ ತಂಡಗಳಿಂದ ಭಜನೆ ನಡೆಯಲಿದ್ದು ಬ್ರಹ್ಮಕಲಶ ಪೂಜೆ, ಪ್ರಧಾನ ಹವನ, ನವಗ್ರಹ ವೃಕ್ಷಪೂಜೆ, ರಾಮತಾರಕ ಮಂತ್ರಹೋಮ, ಪಂಚಾಮೃತ ಅಭಿಷೇಕ ಕಲಶಾಭಿಷೇಕ, ಮಹಾಪೂಜೆ ನಡೆಯಲಿದೆ.

ಸಂಜೆ ರಂಗಪೂಜೆ, ಉತ್ಸವ, ರಥೋತ್ಸವ, ವಸಂತಕಟ್ಟೆಪೂಜೆ, ಅಷ್ಠವಧಾನ ಸೇವೆ, ತೊಟ್ಟಿಲು ಪೂಜೆ ನಡೆಯಲಿದೆ.

ರಾತ್ರಿ ಗಂಟೆ 10-00ರಿಂದ ಯಕ್ಷ-ಗಾನ-ನಾಟ್ಯ-ಹಾಸ್ಯ ವೈಭವ ನಡೆಯಲಿದೆ ಎಂದು ಕಲ್ಲಮ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಆಡಳಿತ ವ್ಯವಸ್ಥಾಪಕರಾದ ಡಾ.ಕೆ ಸೀತಾರಾಮ ಭಟ್ ಕಲ್ಲಮ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.