‘ಶ್ರೀ ರಣಮಂಗಲ ಸುಬ್ರಹ್ಮಣ್ಯ ಕ್ಷೇತ್ರ – ಒಂದು ಸಾಂಸ್ಕೃತಿಕ ಅಧ್ಯಯನ’ : ಸಂಪ್ರಬಂಧಕಿಗೆ ಗೌರವಾರ್ಪಣೆ

0

ಪಾಣಾಜೆ: ಇಲ್ಲಿನ ರಣಮಂಗಲ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಬಗೆಗಿನ ಸಂಪ್ರಬಂಧ ಪುಸ್ತಕ ಬರೆದು ಸ್ನಾತಕೋತ್ತರ ಪದವಿಗಾಗಿ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಕೆ ಮಾಡಿರುವ ಕಾಸರಗೋಡಿನ ಲತಿಕ ಕೆ. ರವರು ಜಾತ್ರೋತ್ಸವದ ವೇಳೆ ಶ್ರೀ ಕ್ಷೇತ್ರಕ್ಕೆ ಬಂದು ಪುಸ್ತಕ ಪ್ರತಿ ನೀಡಿದರು. ಅವರನ್ನು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯರವರು ಶಾಲು ಹೊದೆಸಿ ಗೌರವಿಸಿದರು.

‘ಶ್ರೀ ರಣಮಂಗಲ ಸುಬ್ರಹ್ಮಣ್ಯ ದೇವರ ಹಾಗೂ ಪೂ ಮಾಣಿ, ಕಿನ್ನಿಮಾಣಿ, ರಾಜನ್ ದೈವಗಳ ಒಂದು ಸಾಂಸ್ಕೃತಿಕ ಅಧ್ಯಯನ’ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಕೆಗಾಗಿ ಸಂಪ್ರಬಂಧ ರಚಿಸಿರುತ್ತಾರೆ.

ಗಡಿನಾಡು ಪ್ರದೇಶವಾದ ಕಾಸರಗೋಡು ಜಿಲ್ಲೆಯ ಪ್ರತಿಭಾನ್ವಿತೆಯಾಗಿರುವ ಸ್ನಾತಕೋತ್ತರ ಪದವೀಧರೆ ಲತಿಕಾ ಕಾಸರಗೋಡುರವರು ಮೀಪುಗುರು ಜನಾರ್ದನ ಆಚಾರ್ಯ ಮತ್ತು ಶಾರದಾ ದಂಪತಿಯ ಪುತ್ರಿಯಾಗಿದ್ದಾರೆ.  ಬಬಿತಾ ಎ. ಇವರಿಗೆ ಮಾರ್ಗದರ್ಶನ ಮಾಡಿರುತ್ತಾರೆ.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಹರೀಶ್ ಭಟ್, ಮುರಳೀಧರ ನಾಯ್ಕ ದೇವಸ್ಯ, ಪ್ರಶಾಂತ್ ಪಾಣಾಜೆ, ಪಾಣಾಜೆ ಗ್ರಾ. ಪಂ. ಅಧ್ಯಕ್ಷೆ ಭಾರತಿ ಭಟ್ ದೇವಸ್ಯ, ಸದಸ್ಯೆ ವಿಮಲ ನಾಯ್ಕ ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here