`ಕಾಂಗ್ರೆಸ್‌ನಿಂದ ಸುಳ್ಳು ಭರವಸೆ’ :ಬಲ್ನಾಡು: ವಿಜಯ ಸಂಕಲ್ಪ ಅಭಿಯಾನದಲ್ಲಿ ಡಾ.ಸಿ.ಅಶ್ವಥ್ ನಾರಾಯಣ್

0

ಪುತ್ತೂರು: ಅಧಿಕಾರದಲ್ಲಿರುವಾಗ ಏನೂ ಮಾಡದ ಕಾಂಗ್ರೆಸ್ ನಾಯಕರು ಚುನಾವಣೆ ಸಮೀಪಿಸುತ್ತಿರುವಾಗ ಸುಳ್ಳು ಭರವಸೆ ನೀಡಿ ಜನರ ಹಾದಿ ತಪ್ಪಿಸುತ್ತಿದ್ದಾರೆ. ಬಿಜೆಪಿ ವಿಜಯ ಸಂಕಲ್ಪ ಅಭಿಯಾನದ ಮೂಲಕ ಕಾಂಗ್ರೆಸ್‌ನ ಸುಳ್ಳು ಭರವಸೆಯ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುವುದು ಎಂದು ವಿಜಯ ಸಂಕಲ್ಪ ಅಭಿಯಾನದ ರಾಜ್ಯ ಸಂಚಾಲಕರಾಗಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ ಅಶ್ವಥ್ ನಾರಾಯಣ್ ಅವರು ಹೇಳಿದರು.


ರಾಜ್ಯ ಸರಕಾರದ ಜನಪರ ಆಡಳಿತ, ಜನಕಲ್ಯಾಣ ಯೋಜನೆ ಮತ್ತು ಸರಕಾರದ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಉದ್ದೇ ಶದಿಂದ ಆರಂಭಗೊಂಡಿರುವ ವಿಜಯ ಸಂಕಲ್ಪ ಅಭಿಯಾನಕ್ಕೆ ಬಿಜೆಪಿ ಬಲ್ನಾಡು ಶಕ್ತಿ ಕೇಂದ್ರ ಬಲ್ನಾಡು 107 ನೇ ಬೂತ್‌ನಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿಯಾನದ ಮಾಹಿತಿ ಪಡೆದುಕೊಂಡ ಅವರು ಬಿಜೆಪಿ ಮಂಡಲದ ಕಾರ್ಯಚಟುವಟಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಜಯ ಸಂಕಲ್ಪ ಅಭಿಯಾನ ಆರಂಭಗೊಂಡಿದ್ದು, ಸುಮಾರು 50 ಸಾವಿರ ಸದಸ್ಯತ್ವವನ್ನು ಮಾಡಲಿದ್ದೆವೆ ಎಂದರು. ಈ ಸಂದರ್ಭದಲ್ಲಿ 107 ಬೂತ್‌ನ ಮನೆಗಳನ್ನು ಸಂಪರ್ಕ ಮಾಡಿ ಸರಕಾರದ ಸಾಧನೆಯ ಕರಪತ್ರ ವಿತರಿಸಿ, 200 ಕ್ಕೂ ಹೆಚ್ಚು ಮಂದಿಗೆ ಭಾರತೀಯ ಜನತಾ ಪಾರ್ಟಿಯ ಸದಸ್ಯತ್ವ ನೀಡಿ, ಮನೆಯ ಗೋಡೆಯಲ್ಲಿ ಪಕ್ಷದ ಧ್ವಜದ ಬರಹಕ್ಕೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು.

ಬಿಜೆಪಿ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪುತ್ತೂರು ನಗರ ಮಂಡಲದ ಅಧ್ಯಕ್ಷ ಪಿ.ಜಿ ಜಗನ್ನಿವಾಸ್ ರಾವ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಹಾಗೂ ಗ್ರಾಮಾಂತರ ಮತ್ತು ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಂಡಲದ ವಿಜಯ ಸಂಕಲ್ಪ ಅಭಿಯಾನದ ಸಂಚಾಲಕ ನಿತೀಶ್ ಕುಮಾರ್ ಶಾಂತಿವನ, ಜಯಶ್ರೀ ಎಸ್ ಶೆಟ್ಟಿ, ವಿಜಯ ಸಂಕಲ್ಪ ಅಭಿಯಾನದ ರಾಜ್ಯ ಪ್ರಮುಖ್ ನಯನ ಗಣೇಶ್, ವಿಭಾಗ ಪ್ರಭಾರಿ ಹಾಗೂ ಮೈಸೂರು ವಿದ್ಯುತ್ ನಿಗಮದ ಅಧ್ಯಕ್ಷರೂ ಆದ ಉದಯ್ ಕುಮಾರ್ ಶೆಟ್ಟಿ, ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ, ದಿಶಾ ಸದಸ್ಯ ರಾಮದಾಸ್ ಹಾರಾಡಿ, ಮಂಡಲ ವಿಜಯ ಸಂಕಲ್ಪ ಅಭಿಯಾನದ ಸದಸ್ಯರಾದ ಹರೀಶ್ ಬಿಜತ್ರೆ, ಸುನಿಲ್ ದಡ್ದು, ಪ್ರವೀಣ್ ಸೇರಾಜೆ, ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ನಗರ ಸಭಾ ಸದಸ್ಯೆ ಪೂರ್ಣಿಮ ಬಲ್ನಾಡ್, ಬಲ್ನಾಡು ಪಂಚಾಯತ್ ಅಧ್ಯಕ್ಷೆ ಇಂದಿರಾ ಎಸ್ ರೈ, ಉಪಾಧ್ಯಕ್ಷೆ ಪರಮೇಶ್ವರಿ ಭಟ್, ಶಕ್ತಿ ಕೇಂದ್ರದ ಪ್ರಮುಖ್ ಅಕ್ಷಯ್ ಸಾರ್ಯ, 107 ಬೂತ್‌ನ ಬೂತ್ ಅಧ್ಯಕ್ಷ ಭರತ್ ಚನಿಲ ಹಾಗೂ ಬಿಜೆಪಿ ಪುತ್ತೂರು ಗ್ರಾಮಾಂತರ ಹಾಗೂ ನಗರ ಮಂಡಲದ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರದ ಪ್ರಮುಖರು, ಮಂಡಲದ ಹಿರಿಯ ಮತ್ತು ಕಿರಿಯ ಕಾರ್ಯಕರ್ತರು ಭಾಗವಹಿಸಿದರು.

ಪರಮೇಶ್ವರಿ ಭಟ್ ವಂದಿಸಿದರು. ನಿತೀಶ್ ಕುಮಾರ್ ಶಾಂತಿವನ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here