ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಪರೀಕ್ಷಾ ಸಿದ್ಧತೆ’ಯ ಬಗ್ಗೆ ಮಾಹಿತಿ ಕಾರ್ಯಾಗಾರ

ಪುತ್ತೂರು: ’ಕಲಿಕೆಗೆ ಸುಗಮ ಹಾದಿಯೆಂಬುದಿಲ್ಲ. ಇಷ್ಟಪಟ್ಟು ಕಲಿತಾಗ ವಿಷಯ ಬೇಗ ಅರ್ಥವಾಗುತ್ತದೆ. ಹತ್ತನೇ ತರಗತಿಯ ಪರೀಕ್ಷೆ ಬರೆಯಲಿರುವ ಮಕ್ಕಳು ಸುಗಮ ಕಲಿಕಾ ವಿಧಾನಗಳನ್ನು ಅನುಸರಿಸಿ-ಅಭ್ಯಸಿಸಿ ಉತ್ತಮ ತಯಾರಿಯತ್ತ ತಮ್ಮ ಗಮನ ಹರಿಸಬೇಕು’ ಎಂದು ನಿವೃತ್ತ ಪ್ರಾಂಶುಪಾಲ ಬಿ.ವಿ ಸೂರ್ಯನಾರಾಯಣ ಹೇಳಿದರು.


ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಹತ್ತನೇ ತರಗತಿಯ ಮಕ್ಕಳಿಗೆ ’ವೃತಿಕಾ’ ವಿಜ್ಞಾನ ವೇದಿಕೆ ವತಿಯಿಂದ ಆಯೋಜಿಸಲಾದ ’ಪರೀಕ್ಷಾ ಸಿದ್ಧತೆ’ ವಿಷಯದ ಬಗ್ಗೆ ಅವರು ಮಾತನಾಡಿ ಕಲಿಕೆಯು ಪರೀಕ್ಷೆಗಳಿಗೆ ಸೀಮಿತವಾಗದೆ ತಿಳುವಳಿಕೆಯ ದೃಷ್ಟಿಯಿಂದ ಮುನ್ನಡೆಯುವಂತಿರಬೇಕು ಎಂದು ಹೇಳಿದರು. ವಿಜ್ಞಾನ ಸಂಘದ ಸಂಯೋಜಕರಾದ ರೇಷ್ಮಾ ಹಾಗೂ ಪುಷ್ಪಾವತಿ ಕಾರ್ಯಕ್ರಮವನ್ನು ಆಯೋಜಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.