ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ದೇವಶ್ಯ ತರವಾಡು ಮನೆಯಲ್ಲಿ ಕಲ್ಕುಡ ಕಲ್ಲುರ್ಟಿ, ಪಂಜುರ್ಲಿ ಧರ್ಮದೈವ ಮತ್ತು ಸಪರಿವಾರ ದೈವಗಳ ಧರ್ಮನೇಮೋತ್ಸವ ಜ.22 ಮತ್ತು 23ರಂದು ನಡೆಯಿತು.

ಜ.22ರಂದು ಬೆಳಿಗ್ಗೆ ಗಣಪತಿ ಹೋಮ, ಸಂಜೆ ಭಂಡಾರ ತೆಗೆದು ಶ್ರೀರಕ್ತೇಶ್ವರಿ, ಮಹಿಷಂತಾಯ ನೇಮೋತ್ಸವ, ರಾತ್ರಿ ಕೋಡಿಯಡ್ಕದಿಂದ ಮತ್ತು ಬೊಳಂದೂರಿನಿಂದ ಭಂಡಾರ ತೆಗೆದು ಕಲ್ಕುಡ, ಕಲ್ಲುರ್ಟಿ, ಗ್ರಾಮ ಪಂಜುರ್ಲಿ ನೇಮೋತ್ಸವ, ಧರ್ಮದೈವ ಮತ್ತು ಸಹಪರಿವಾರ ದೈವಗಳ ನೇಮೋತ್ಸವ, ರಾತ್ರಿ ಅನ್ನಸಂತರ್ಪಣೆ ನಡೆಯಿತು. ಜ.23ರಂದು ಅಪರಾಹ್ನ ಕುಪ್ಪೆಪಂಜುರ್ಲಿ, ಮನಿಪಂದೆ ಪಂಜುರ್ಲಿ, ಜೇಡರ ಪಂಜುರ್ಲಿ, ಕಲ್ಲುರ್ಟಿ, ಮಲೆ ಚಾಮುಂಡಿ ಮತ್ತು ಇತರ ದೈವಗಳಿಗೆ ನೇಮೋತ್ಸವ ನಡೆದು ಅನ್ನಸಂತರ್ಪಣೆ ನಡೆಯಿತು. ದೇವಶ್ಯ ಕುಟುಂಬಸ್ಥರು ಉಪಸ್ಥಿತರಿದ್ದರು.