ಕಾಣಿಯೂರು: ಸ್ವಚ್ಛ ಭಾರತದ ಪರಿಕಲ್ಪನೆಗೆ ಪೂರಕವಾಗಿ ಸ್ವಚ್ಛ ಭಾರತದ ನಿರ್ಮಾಣಕ್ಕಾಗಿ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಕಾಪಾಡುವುದಕ್ಕಾಗಿ ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆಗಳಿಗೆ ಬೋರೋ ಬ್ಯಾಗ್ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಾರ್ವತಿ ಮರಕ್ಕಡ, ಉಪಾಧ್ಯಕ್ಷರಾದ ಜಯಂತ ಅಬೀರ, ಸದಸ್ಯರುಗಳಾದ ಉಮೇಶ್ವರಿ ಅಗಳಿ, ಕುಸುಮ ಅಂಕಜಾಲು, ತೇಜಾಕ್ಷಿ ಕೊಡಂಗೆ, ಗೌರಿ ಮಾದೋಡಿ, ಜಯರಾಮ ಬೆಳಂದೂರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ. ಕೆ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ಗೌರಿ, ಎಲ್.ಸಿ.ಆರ್.ಪಿ. ಸವಿತಾ, ಪ್ರಗತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಕಾವ್ಯ ಕಂಡೂರು, ಸ್ವಚ್ಛತಾ ವಾಹಿನಿಯ ಚಾಲಕರಾದ ನಿಶಿತಾ, ಸಿಬ್ಬಂದಿ ಲಕ್ಷ್ಮೀ ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿ ಸಂತೋಷ್ ಸಹಕರಿಸಿದರು.