ಪುತ್ತೂರು: ಬೊಳ್ವಾರು ಶಿವದುರ್ಗಾ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ತ್ರಿನೇತ್ರದತ್ತ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ಆಡಳಿತ ಮಂಡಳಿಯ ಮುಂದಿನ ಐದು ವರ್ಷಗಳ ಅವಧಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಡಿ.13 ರಂದು ನೆರವೇರಿತು.
ಅಧ್ಯಕ್ಷರಾಗಿ ಪುತ್ತೂರು ಪ್ರಾಪರ್ಟೀಸ್ ನ ನಿತಿನ್ ಪಕ್ಕಳ, ಉಪಾಧ್ಯಕ್ಷರಾಗಿ ಜಿ.ಎಸ್ ನೆಕ್ಸಾಸ್ ನ ಕೆ.ರಾಜೇಂದ್ರ ಪ್ರಸಾದ್ ಶೆಟ್ಟಿ, ನಿರ್ದೇಶಕರಾಗಿ ಪಿಡಬ್ಲ್ಯೂಡಿ.ಕಾಂಟ್ರಕ್ಟರ್ ಪ್ರಜ್ವಲ್ ಕೆ.ಆರ್, ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಡಾ.ಕಿಶೋರ್ ಕುಮಾರ್ ಬಿ.ಆರ್, ಶ್ರೀಪಾದ ಎಸ್, ಛಾಯಾಕುಟೀರದ ಪ್ರಸೀದ ಕೃಷ್ಣ ಕಲ್ಲೂರಾಯ, ಶ್ರೀಮಂಗಳಾ ಕನ್ಸಲ್ಟೆಂಟ್ ನ ನಿತಿನ್ ಕುಮಾರ್ ಕೆ, ಬಿಲ್ಡಿಂಗ್ಸ್ ಆಂಡ್ ಡೆವಲಪರ್ಸ್ ನ ಪ್ರಸಾದ್ ಕೆ.ಎನ್, ಪಿಡಬ್ಲ್ಯೂಡಿ ಕಾಂಟ್ರಕ್ಟರ್ ಎನ್.ಯತೀಶ್, ಅನುಪಮ, ಹಿತೈಷಿ ಪಕ್ಕಳ ಆಯ್ಕೆಯಾದರು. ರಿಟರ್ನಿಗ್ ಅಧಿಕಾರಿ ನವೀನ್ ಕುಮಾರ್ ಎಂ.ಎಸ್ ರವರು ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.