ಇಚ್ಲಂಪಾಡಿ: ಸುಮಾರು ಎಂಟು ಶತಮಾನಗಳ ಭವ್ಯ ಇತಿಹಾಸವನ್ನು ಹೊಂದಿರುವ ಇಚ್ಲಂಪಾಡಿ ಬೀಡು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯನ್ನು ಪುನರ್ ರಚಿಸಲಾಗಿದೆ.
ಅನುವಂಶಿಕ ಆಡಳಿತ ಮೊಕ್ತೇಸರ ಶುಭಕರ ಹೆಗ್ಗಡೆ ಅವರ ನೇತೃತ್ವದಲ್ಲಿ ರಚನೆಗೊಂಡಿರುವ ಈ ನೂತನ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಜಯರಾಜ್ ಕೊರಮೇರು ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ವೇಣುಗೋಪಾಲ ಶೆಟ್ಟಿ ಹೊಸಮನೆ ಮತ್ತು ಅಮಿತಾ ಶೆಟ್ಟಿ ಕುಡಾಲ, ಪ್ರಧಾನ ಕಾರ್ಯದರ್ಶಿಯಾಗಿ ಗಿರೀಶ್ ಸಾಲಿಯಾನ್ ಬದನೆ, ಜೊತೆ ಕಾರ್ಯದರ್ಶಿಯಾಗಿ ಕೇಶವ ಗೌಡ ಅಲೆಕ್ಕಿ, ಜ್ಯೋತ್ಸ್ನಾ ಸತೀಶ್ ಮಾನಡ್ಕ, ವಸಂತ ಗೌಡ ಬಿಜೇರು, ದಿವ್ಯೇಶ್ ಗೌಡ ಕಲ್ಯ, ಚಿದಂಬರ ಕುಡಾಲ, ಕೃಷ್ಣಪ್ಪ ಗೌಡ ಒಡ್ಯತ್ತಡ್ಕ, ಸುರೇಶ್ ಪರವ ಬಿಜೇರು ಹಾಗೂ ನಾಗೇಶ್ ಕೆಡಂಬೈಲು ಆಯ್ಕೆಗೊಂಡಿದ್ದಾರೆ. ದೇವಳದ ಪ್ರಧಾನ ಅರ್ಚಕರಾಗಿ ಹರಿಪ್ರಸಾದ್ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ.
