ನೆಲ್ಯಾಡಿ: ಇಲ್ಲಿನ ಸೈಂಟ್ ಗ್ರಿಗೋರಿಯೋಸ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನಲ್ಲಿ ಸೈಂಟ್ ಗ್ರಿಗೋರಿಯಸ್ ಪುಣ್ಯ ಸ್ಮರಣೆ ಹಾಗೂ ಚರ್ಚ್‌ನ ವಾರ್ಷಿಕ ಹಬ್ಬ ಅ.31 ಮತ್ತು ನ.1ರಂದು ನಡೆಯಿತು.

ಅ.26ರಂದು ಬೆಳಿಗ್ಗೆ ಪ್ರಭಾತ ಪ್ರಾರ್ಥನೆ, ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲಿತ ಅವರಿಂದ ದಿವ್ಯಬಲಿಪೂಜೆ, ಹಬ್ಬದ ಧ್ವಜಾರೋಹಣದೊಂದಿಗೆ ವಾರ್ಷಿಕ ಹಬ್ಬ ಆರಂಭಗೊಂಡಿತು. ಅ.29ರಂದು ಬೆಳಿಗ್ಗೆ ಪ್ರಭಾತ ಪ್ರಾರ್ಥನೆ, ದಿವ್ಯಬಲಿಪೂಜೆ ನೆಲ್ಯಾಡಿ ಸೈಂಟ್ ಗ್ರಿಗೋರಿಯೋಸ್ ಓರ್ಥಡೋಕ್ಸ್ ಚರ್ಚ್‌ನ ವೆ|ರೆ| ಜಿ.ಎಂ.ಸ್ಕರಿಯಾ ರಂಬಾನ್‌ರವರ ನೇತೃತ್ವದಲ್ಲಿ ನಡೆಯಿತು. ಸಂಜೆ ಸಂಧ್ಯಾ ಪ್ರಾರ್ಥನೆ ನಡೆಯಿತು. ಅ.30ರಂದು ಬೆಳಿಗ್ಗೆ ಪ್ರಭಾತ ಪ್ರಾರ್ಥನೆ, ದಿವ್ಯಬಲಿಪೂಜೆ ಸಂಪ್ಯಾಡಿ ಸೈಂಟ್ ಮೇರೀಸ್ ಓರ್ಥಡೋಕ್ಸ್ ಚರ್ಚ್‌ನ ವಿಕಾರ್ ರೆ|ಫಾ|ವಿ.ಸಿ.ಜೋಸ್‌ರವರ ನೇತೃತ್ವದಲ್ಲಿ ನಡೆಯಿತು. ಸಂಜೆ ಸಂಧ್ಯಾ ಪ್ರಾರ್ಥನೆ ನಡೆಯಿತು. ಅ.31ರಂದು ಬೆಳಿಗ್ಗೆ ಪ್ರಭಾತ ಪ್ರಾರ್ಥನೆ, ದಿವ್ಯಬಲಿಪೂಜೆ ಮಣಿಪಾಲ್ ಸೈಂಟ್ ತೋಮಸ್ ಓರ್ಥಡೋಕ್ಸ್ ಚರ್ಚ್‌ನ ವಿಕಾರ್ ರೆ.ಫಾ.ಸೋಬಿನ್ ದಾನಿಯಲ್ ನೇತೃತ್ವದಲ್ಲಿ ನಡೆಯಿತು. ಸಂಜೆ ಸಂಧ್ಯಾ ಪ್ರಾರ್ಥನೆ, ಬಳಿಕ ಸುಲ್ತಾನ್ ಬತ್ತೇರಿ ಧರ್ಮಪ್ರಾಂತ್ಯದ ಚಿಂಗೇರಿ ಸೈಂಟ್ ಮೇರೀಸ್ ಓರ್ಥಡೋಕ್ಸ್ ಚರ್ಚ್‌ನ ವಿಕಾರ್ ರೆ.ಫಾ.ಜಸ್ಟಿನ್ ಪಿ.ಕುರಿಯಾಕೋಸ್‌ರವರಿಂದ ಹಬ್ಬದ ಸಂದೇಶ, ಮೆರವಣಿಗೆ, ಆಶೀರ್ವಾದ, ಸಹಭೋಜನ ನಡೆಯಿತು. ನ.1ರಂದು ಬೆಳಿಗ್ಗೆ ಪ್ರಭಾತ ಪ್ರಾರ್ಥನೆ, ರೆ.ಫಾ.ಜಸ್ಟಿನ್ ಪಿ.ಕುರಿಯಾಕೋಸ್‌ರವರಿಂದ ಪವಿತ್ರ ದಿವ್ಯ ಬಲಿಪೂಜೆ, ಹಬ್ಬದ ಸಂದೇಶ, ಮಧ್ಯಾಹ್ನ ಸಹಭೋಜನ, ಹರಕೆ ಸಮರ್ಪಣೆ, ಏಲಂ, ಹಬ್ಬದ ಮೆರವಣಿಗೆ, ಆಶೀರ್ವಾದ, ಪ್ರಸಾದ ವಿತರಣೆ, ಧ್ವಜಾವರೋಹಣದೊಂದಿಗೆ ವಾರ್ಷಿಕ ಹಬ್ಬ ಸಂಪನ್ನಗೊಂಡಿತು. ಚರ್ಚ್‌ನ ವಿಕಾರ್ ರೆ.ಫಾ.ಎಲ್ದೋ ಎಂ.ಪೌಲ್, ಸೆಕ್ರೆಟರಿ ಲೂಯಿಸ್ ವರ್ಗೀಸ್, ಖಜಾಂಜಿ ಸಿ.ತೋಮಸ್‌ರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮುಟ್ಟುಂಪುರಂ ಕುಟುಂಬಸ್ಥರು ಹಬ್ಬದ ಹರಕೆದಾರರಾಗಿದ್ದಾರೆ.
ಸನ್ಮಾನ
ಚರ್ಚ್‌ನ ಸದಸ್ಯರಾಗಿರುವ ಹಿರಿಯ ನಾಗರಿಕರಿಗೆ, ನಿವೃತ್ತ ಸೈನಿಕರಿಗೆ, ಹೆಡ್‌ಕಾನ್ಸ್‌ಸ್ಟೇಬಲ್ ಆಗಿ ಮುಂಭಡ್ತಿ ಪಡೆದುಕೊಂಡಿರುವ ರೆಜಿ ವಿ.ಎಂ.ಹಾಗೂ ಕಡಬ ತಾಲೂಕು ಭೂ ನ್ಯಾಯಮಂಡಳಿ ಸದಸ್ಯರಾಗಿ ರಾಜ್ಯ ಸರಕಾರದಿಂದ ನಾಮನಿರ್ದೇಶನಗೊಂಡಿರುವ ಕೆ.ಪಿ.ಅಬ್ರಹಾಂ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.