ಸರ್ವೆ ಕಲ್ಪಣೆ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

0

ಪುತ್ತೂರು: ಸರಕಾರಿ ಪ್ರೌಢಶಾಲೆ ಸರ್ವೆ ಕಲ್ಪಣೆ ಇಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಶಾಲಾಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಸಿದ್ದೀಕ್ ಸುಲ್ತಾನ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಕನ್ನಡ ಪ್ರಾಧ್ಯಾಪಕರಾದ ನಳಿನಿ ಡಿ. ರಾಜ್ಯೋತ್ಸವದ ಮಹತ್ವದ ಬಗ್ಗೆ ಮಾತನಾಡಿ, ಸಂದೇಶ ಭಾಷಣ ಮಾಡಿದರು. ಮುಖ್ಯ ಅಧ್ಯಾಪಕಿ ಉಮಾವತಿ ಎಲ್. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪುತ್ತೂರು ರೋಟರಿ ಕ್ಲಬ್ ಸಂಸ್ಥೆಯ ಉಪಾಧ್ಯಕ್ಷ ಪ್ರೊ. ದತ್ತಾತ್ರೇಯ ರಾವ್, ಸದಸ್ಯರಾದ ಶ್ರೀಧರ ಕಣಜಾಲ್, ಹೆರಾಲ್ಡ್ ಮಾಡ್ತಾ, ನಿವೃತ್ತ ಶಾರೀರಿಕ ಶಿಕ್ಷಕರಾದ ಸಹದೈವ್ ಹೆರಾಜೆ ಶುಭಹಾರೈಸಿದರು. ರೋಟರಿ ಕ್ಲಬ್ ಸಂಸ್ಥೆಯ ವತಿಯಿಂದ ಮಕ್ಕಳಿಗೆ ಉಚಿತ ಐ.ಡಿ. ವಿತರಣೆ ಮಾಡಿದರು. ವಿದ್ಯಾರ್ಥಿಗಳಿಗೆ ಸರಕಾರ ಕೊಡಮಾಡಲಾದ ಶೂ , ಸಾಕ್ಸ್ ವಿತರಣೆ ಮಾಡಲಾಯಿತು. ವೇದಿಕೆಯಲ್ಲಿ ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಅಝೀಝ್ ರೆಂಜಲಾಡಿ , ಅಬೂಬಕರ್ ಮುಸ್ಲಿಯಾರ್ , ಪೋಷಕರಾದ ಅಬ್ದುಲ್ ರಹೀಂ , ಹಸನ್ , ಅಧ್ಯಾಪಕರಾದ ಜಾರ್ಜ್ ಕೆ.ವಿ, ಕಾಂಚನಾ ಕೆ.ಸಿ, ಜ್ಯೋತಿ ವಿ. ಪ್ರಭು ಉಪಸ್ಥಿತರಿದ್ದರು. ಅಧ್ಯಾಪಕರಾದ ಉಮಾಶಂಕರ್ ಡಿ ಕಾರ್ಯಕ್ರಮ ನಿರೂಪಿಸಿ , ವೆಂಕಟೇಶ್ ಬಿ. ಧನ್ಯವಾದಗೈದರು.

LEAVE A REPLY

Please enter your comment!
Please enter your name here