





ಪುತ್ತೂರು: ಕೆಎಸ್‌ಆರ್‌ಟಿಸಿ ಪುತ್ತೂರು ಬಸ್‌ನಿಲ್ದಾಣದ ಸಂಚಾರ ನಿಯಂತ್ರಕ ಆನಂದ ಪೂಜಾರಿ ಅವರು ಅ.31ರಂದು ಸೇವಾ ನಿವೃತ್ತಿ ಹೊಂದಿದ್ದರು. ಅವರಿಗೆ ನ.1ರಂದು ಸಂಸ್ಥೆಯ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.


ಘಟಕದ ಅಧಿಕಾರಿಗಳಾದ ಈಶ್ವರ್, ಪೂರ್ಣೇಶ್, ರಮೇಶ್ ಶೆಟ್ಟಿ, ಘಟಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ಸಹಿತ ಸಿಬ್ಬಂದಿಗಳು ಆನಂದ ಪೂಜಾರಿಯವರನ್ನು ಸನ್ಮಾನಿಸಿದರು. ಈ ಸಂದರ್ಭ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು. ವೆಂಕಟ್ರಮಣ ಭಟ್ ಕಾರ್ಯಕ್ರಮ ನಿರೂಪಿಸಿದರು. ಮಾಧವ ಶೆಣೈ ಅವರು ವಂದಿಸಿದರು.















